Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೊಲೀಸ್ ಅಧಿಕಾರಿಗಳಿಗೆ PFI ಜೊತೆ ನಂಟು!

ಪೊಲೀಸ್ ಅಧಿಕಾರಿಗಳಿಗೆ PFI ಜೊತೆ ನಂಟು!
ತಿರುವನಂತಪುರಂ , ಬುಧವಾರ, 5 ಅಕ್ಟೋಬರ್ 2022 (07:44 IST)
ತಿರುವನಂತಪುರಂ : ಕನಿಷ್ಠ 873 ಪೊಲೀಸ್ ಅಧಿಕಾರಿಗಳು ನಿಷೇಧಿತ ಪಿಎಫ್ಐ ಸಂಘಟನೆಯ ಜೊತೆ ಸಂಬಂಧ ಹೊಂದಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ತಿಳಿಸಿದ ವರದಿಯಲ್ಲಿ ಹೇಳಿದೆ.

ಸಬ್ ಇನ್ಸ್ಪೆಕ್ಟರ್, ಸ್ಟೇಷನ್ ಹೆಡ್ ಆಫೀಸ್ ಶ್ರೇಣಿ ಮತ್ತು ಸಿವಿಲ್ ಪೊಲೀಸರ ಮೇಲೆ ಈಗ ಎನ್ಐಎ ಕಣ್ಣಿಟ್ಟಿದೆ. ಪಿಎಫ್ಐ ಬಗ್ಗೆ ತನಿಖೆ ನಡೆಸುತ್ತಿರುವ ಎನ್ಐಎಗೆ ಅಧಿಕಾರಿಗಳು ಹಣಕಾಸಿನ ವ್ಯವಹಾರ ನಡೆಸಿದ ಮಾಹಿತಿ ಲಭ್ಯವಾದ ಬೆನ್ನಲ್ಲೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಸ್ಪೆಷಲ್ ಬ್ರ್ಯಾಂಚ್, ಗುಪ್ತಚರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಅಧಿಕಾರಿಗಳ ಜೊತೆ ಪಿಎಫ್ಐಗೆ ನಂಟಿತ್ತು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಮಾಹಿತಿ ಸೋರಿಕೆ ಮಾಡಿದ ಆರೋಪ ಈ ಪೊಲೀಸರ ಮೇಲಿದೆ.  ಪಿಎಫ್ಐ ಮೇಲೆ ದಾಳಿಗೂ ಮೊದಲೇ  ದಾಳಿ ನಡೆಸುವ ವಿಚಾರ ಸೋರಿಕೆಯಾಗಿತ್ತು ಎನ್ನುವುದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ವೇಳೆ ಉಚಿತ ಕೊಡುಗೆ ಆಫರ್ !