Publish Date: Mon, 05 Nov 2018 (18:23 IST)
Updated Date: Mon, 05 Nov 2018 (18:25 IST)
ದರೋಡೆ ಪ್ರಕರಣದ ಇಬ್ಬರು ಆರೋಪಿಗಳ ಸಹಿತ 1.75 ಕೋಟಿ ನಗದು ವಶಪಡಿಸಿಕೊಂಡಿರುವ ಪ್ರಕರಣ ನಡೆದಿದೆ.
ಮಂಗಳೂರು ನಗರ ಪೊಲೀಸರ ಮಿಂಚಿನ ಕಾರ್ಯಚರಣೆ ನಡೆಸಿದ್ದು, ದರೋಡೆ ಪ್ರಕರಣದ ಇಬ್ಬರು ಆರೋಪಿಗಳ ಸಹಿತ 1.75 ಕೋಟಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ ಕೆಲದಿನಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣವನ್ನು ಬೇಧಿಸಿದ್ದು, ಅಬ್ದುಲ್ ಮನ್ನಾನ್ (29) ಹಾಗೂ ರಾಝಿ (26) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ 1.75 ಕೋಟಿ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ ಇನೋವಾ ಕಾರು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ವೈಷ್ಣವಿ ಬೆಳ್ಳಿ ಆಭರಣಗಳ ಮಳಿಗೆ ಮಾಲಿಕ ಸಂತೋಷ್ ಎಂಬಾತರಿಗೆ ಸೇರಿದ ಹಣವನ್ನು ಮುಂಬಯಿಯಿಂದ ಮಂಗಳೂರಿಗೆ ತರುವಾಗ ಒಟ್ಟು 6 ಜನ ಆರೋಪಿಗಳು ಸೇರಿ ದರೋಡೆ ಮಾಡಿದ್ದರು. 4 ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.