Publish Date: Mon, 05 Nov 2018 (17:54 IST)
Updated Date: Mon, 05 Nov 2018 (17:56 IST)
ಯುವಕನೊಬ್ಬ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಈ ಘಟನೆ ನಡೆದಿದೆ. ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಸರ್ವಿಸ್ ಸ್ಟೇಷನ್ ನಲ್ಲಿ ಸ್ಕೂಟಿಯಲ್ಲಿ ಬಂದ ಓರ್ವ ಯುವಕ 300 ರೂಪಾಯಿ ಪೆಟ್ರೋಲ್ ಹಾಕಿಸಿ ಮೊದಲಿಗೆ ಎಟಿಎಂ ಕೊಟ್ಟಿದ್ದಾನೆ.
ಎಟಿಎಂನಲ್ಲಿ ಹಣ ಇಲ್ಲದ ಕಾರಣ ಪೆಟ್ರೋಲ್ ಬಂಕ್ ಸಿಬ್ಬಂದಿ ಹಣ ಕೇಳಿದ್ದಾನೆ. ಹಣ ಕೇಳುತ್ತಿದಂತೆ ಸ್ಕೂಟಿಯಲ್ಲಿದ್ದ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಸ್ಕೂಟಿಯಲ್ಲಿದ್ದ ಯುವಕ ಪರಾರಿಯಾಗುತ್ತಿರೋ ದೃಶ್ಯಾವಳಿಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.