Publish Date: Mon, 24 Jul 2023 (20:01 IST)
Updated Date: Mon, 24 Jul 2023 (20:03 IST)
ಸುದೀಪ್ ಹೆಸರಿನ ಸುತ್ತ ವಿವಾದ ಹುಟ್ಟಿಕೊಂಡಿದೆ. ನಿರ್ಮಾಪಕ ಎಂಎನ್ ಕುಮಾರ್ ಅವರು ಸುದೀಪ್ ಅವರಿಂದ ಮೋಸ ಆಗಿದೆ ಎನ್ನುವ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿ ಸಂಧಾನ ಸಭೆ ಕೂಡ ನಡೆದಿದೆ. ಈ ಮಧ್ಯೆ ನಿರ್ಮಾಪಕ ರೆಹಮಾನ್ ಕೂಡ ಸುದೀಪ್ ವಿರುದ್ಧ ಕಿಡಿಕಾರಿದ್ದರು. ಇವರ ಹಿಂದಿರುವ ಮಾಸ್ಟರ್ ಮೈಂಡ್ ನಿರ್ಮಾಪಕ ಸೂರಪ್ಪ ಬಾಬು ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸೂರಪ್ಪ ಬಾಬು ಅವರು ಪತ್ರಿಕಾ ಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನ ಹಾಗೂ ಸುದೀಪ್ ಮಧ್ಯೆ ಇರುವ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಆಗಿದೆ. ಆದ್ರೆ ಒಳ್ಳೆ ಕೆಲಸ ಮಾಡಿ ಇಲ್ಲಾಂದ್ರೆ ಬಿಡಿ. ಸುದೀಪ್ ಅವರ ಬಾಯಲ್ಲಿ ನನ್ನ ಹೆಸರು ಬಂದಿಲ್ಲ. ನಾನು ಅವರು ಸಿನಿಮಾ ಮಾಡಬಹುದು ಎಂದರು.