Publish Date: Thu, 06 Jul 2023 (12:30 IST)
Updated Date: Thu, 06 Jul 2023 (12:36 IST)
ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಮಾತ್ರವಲ್ಲದೇ, ದೇಶಾದ್ಯಂತ ಅಪಾರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.ಸುದೀಪ್ ಸಿನಿಮಾ ಕೆಲಸದ ನಡುವೆ ಸಾಮಾಜಿಕ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಇದೀಗ ಸುದೀಪ್ ಕ್ಯಾನ್ಸರ್ನಿಂದ ಬಳಲುತ್ತಿದ್ದ 9 ವರ್ಷದ ಬಾಲಕಿಯನ್ನು ಭೇಟಿಯಾಗಿದ್ದಾರೆ. ಚಾಮರಾಜಪೇಟೆಯ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಾಕ್ಷಿ ಎಂಬಾಕೆಯನ್ನು ಸುದೀಪ್ ಭೇಟಿಯಾಗಿದ್ದಾರೆ. ಬಾಲಕಿ ಸುದೀಪ್ ಅವರನ್ನು ಭೇಟಿಯಾಗಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದಳು. ಸುದೀಪ್ ಬಾಲಕಿಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಸುದೀಪ್ ಬಾಲಕಿಗೆ ಆಟೋಗ್ರಾಫ್ ನೀಡಿ, ಪ್ರೀತಿಯಿಂದ ಉಡುಗೊರೆ ನೀಡಿದ್ದಾರೆ.