Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರತಂಡ ಮೈಸೂರಿನಲ್ಲಿ ಮಾರ್ಚ್ 20 ರಂದು ಪ್ರಿರಿಲೀಸ್ ಈವೆಂಟ್ ಮಾಡಲು ಯೋಜನೆ ಹಾಕಿತ್ತು. ಆದರೆ ಅದೀಗ ದಿಡೀರ್ ರದ್ದಾಗಿದೆ.
ನಿನ್ನೆ ಫೇಸ್ ಬುಕ್ ಲೈವ್ ಬಂದಿರುವ ಪುನೀತ್ ರಾಜಕುಮಾರ್ ಈ ವಿಚಾರ ತಿಳಿಸಿದ್ದಾರೆ. ಮೈಸೂರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ವಿಚಾರ ತಿಳಿಸಿದಾಗ ಹಲವರ ನಮ್ಮ ಜಿಲ್ಲೆಗೆ ಏಕೆ ಬರುತ್ತಿಲ್ಲ ಎಂದು ಕೇಳಿದ್ದರು. ಹೀಗಾಗಿ ಕೇವಲ ಮೈಸೂರಿನಲ್ಲಿ ಕಾರ್ಯಕ್ರಮ ನಡೆಸುವ ಬದಲು ಮಾರ್ಚ್ 21 ರಿಂದ ನಾನು ಯುವರತ್ನ ತಂಡದ ಜೊತೆಗೆ ಮೂರು ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಿ ಯುವರತ್ನ ಬಗ್ಗೆ ಪ್ರಚಾರ ಮಾಡಲಿದ್ದೇವೆ ಎಂದು ಪುನೀತ್ ಹೇಳಿದ್ದಾರೆ.
ಇದಲ್ಲದೆ, ಕೊರೋನಾ ಕಾರಣದಿಂದ ಈ ಬಾರಿಯೂ ನಾನು ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ಕುಟುಂಬಸ್ಥರ ಜೊತೆ ದೇವಸ್ಥಾನಗಳಿಗೆ ಹೋಗುತ್ತಿದ್ದೇನೆ. ಹೀಗಾಗಿ ಮನೆ ಬಳಿ ಯಾರೂ ಬರಬೇಡಿ ಎಂದು ಪುನೀತ್ ಮನವಿ ಮಾಡಿದ್ದಾರೆ.