Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಗೆದ್ದಿದೆ. ಜೊತೆಗೆ ಸೋತಿದ್ದ ಚಿತ್ರರಂಗಕ್ಕೂ ಹೊಸ ಉತ್ಸಾಹ ನೀಡಿದೆ.
ಲಾಕ್ ಡೌನ್ ಬಳಿಕ ಚಿತ್ರರಂಗ ತೆರೆದರೂ ಜನ ಥಿಯೇಟರ್ ಗೆ ಬರಲು ಹಿಂದೇಟು ಹಾಕುತ್ತಿದ್ದರು. ಈಗ ಸರ್ಕಾರವನ್ನು ಒಪ್ಪಿಸಿ ಫುಲ್ ಹೌಸ್ ಪ್ರದರ್ಶನಕ್ಕೆ ಅನುಮತಿ ಪಡೆದುಕೊಂಡರೂ ನಿರ್ಮಾಪಕರಿಗೆ ಒಳಗೊಳಗೇ ಅಳುಕಿತ್ತು.
ಆದರೆ ಆ ಅಳುಕನ್ನೆಲ್ಲಾ ನಿವಾರಿಸಿ ರಾಬರ್ಟ್ ಗೆದ್ದಿದೆ. ಅದೂ ಭರ್ಜರಿ ಗಳಿಕೆ ಮಾಡಿ ಮುಂದಿನ ದಿನಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಹೊರಟಿರುವ ನಿರ್ಮಾಪಕರಿಗೂ ಧೈರ್ಯ ತುಂಬಿದೆ. ಮೂರು ದಿನದಲ್ಲಿ 45 ಕೋಟಿ ರೂ. ಬಾಚಿ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿದೆ.
ರಾಬರ್ಟ್ ಬಳಿಕ ಯುವರತ್ನ ಬಿಗ್ ಸ್ಟಾರ್ ಇರುವ ಸಿನಿಮಾ. ಈ ಸಿನಿಮಾ ಏಪ್ರಿಲ್ 1 ಕ್ಕೆ ಥಿಯೇಟರ್ ಗೆ ಬರಲಿದ್ದು, ಈಗಾಗಲೇ ಪವರ್ ಸ್ಟಾರ್ ಅಭಿಮಾನಿಗಳು ಕಾತುರದಿಂದ ಎದಿರು ನೋಡುತ್ತಿದ್ದಾರೆ. ಈ ಸಿನಿಮಾವೂ ಗೆದ್ದಲ್ಲಿ ಚಿತ್ರರಂಗ ಸಹಜ ಸ್ಥಿತಿಗೆ ಬಂದಿದೆ ಎಂದೇ ಹೇಳಬಹುದು.