Select Your Language

Notifications

webdunia
webdunia
webdunia
webdunia

ಎಷ್ಟು ಹಿಟ್ ಕೊಟ್ರೂ ಕನ್ನಡ ಸಿನಿಮಾ ಬಗ್ಗೆ ಅಸಡ್ಡೆ ಯಾಕೆ? ನಿರ್ಮಾಪಕ ಕಾರ್ತಿಕ್ ಗೌಡ ತಿರುಗೇಟು

ಗಾಳಿಪಟ 2
ಬೆಂಗಳೂರು: ಕನ್ನಡ ಸಿನಿಮಾಗಳೆಂದರೆ ಇತರ ಸಿನಿಮಾ ಮಂದಿಗೆ ಒಂಥರಾ ಅಸಡ್ಡೆ. ಕೆಜಿಎಫ್ ಸಿನಿಮಾ ಬಂದ ಮೇಲೆ ಕನ್ನಡ ಸಿನಿಮಾಗಳನ್ನು ನೋಡುವ ದೃಷ್ಟಿಕೋನ ಬದಲಾಗಿದೆ.

ಹಾಗಿದ್ದರೂ ಕೆಲವರು ಇನ್ನೂ ಕನ್ನಡ ಸಿನಿಮಾಗಳೆಂದರೆ ಅವಗಣನೆ ಮಾಡುವವರಿದ್ದಾರೆ. ಅದೇ ರೀತಿ ಮಾಡಿದ ಸಿನಿಮಾ ವಿಮರ್ಶಕ ಶ್ರೀಧರ್ ಪಿಳ್ಳೈಗೆ ಕನ್ನಡ ನಿರ್ಮಾಪಕ ಕಾರ್ತಿಕ್ ಗೌಡ ತಿರುಗೇಟು ಕೊಟ್ಟಿದ್ದಾರೆ.

ಲಾಲ್ ಸಿಂಗ್ ಛಡ್ಡಾ ಫ್ಲಾಪ್ ಆಗಿದ್ದನ್ನು ಉಲ್ಲೇಖಿಸಿ ಶ್ರೀಧರ್ ಪಿಳ್ಳೈ ನೋಡಿ ಇದೇ ದಿನ ಬಿಡುಗಡೆಯಾದ ಇತರ ದಕ್ಷಿಣದ ಸಿನಿಮಾಗಳು ಮೊದಲ ದಿನ ಉತ್ತಮ ಗಳಿಕೆ ಮಾಡಿವೆ ಎಂದು ತಮಿಳು, ತೆಲುಗು ಸಿನಿಮಾಗಳ ಪಟ್ಟಿ ನೀಡಿದ್ದರು. ಆದರೆ ಇದೇ ದಿನ ಬಿಡುಗಡೆಯಾದ ಕನ್ನಡ ಸಿನಿಮಾ ಗಾಳಿಪಟ 2  ಮೊದಲ ದಿನವೇ ಭರ್ಜರಿ ಗಳಿಕೆ ಮಾಡಿದ್ದರೂ ಹೆಸರೇ ಉಲ್ಲೇಖಿಸಿಲ್ಲ.

ಹೀಗಾಗಿ ಕಾರ್ತಿಕ್ ಗೌಡ ಶ್ರೀಧರ್ ಪಿಳ್ಳೈ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದು, ಗಾಳಿಪಟ 2 ಎಂಬ ಕನ್ನಡ ಸಿನಿಮಾವೂ ಇದೇ ದಿನ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿದೆ. ನೀವು ಕನ್ನಡ ಸಿನಿಮಾವನ್ನು ಯಾಕೆ ಇತರ ಭಾಷೆಗಳ ಜೊತೆ ನೋಡಲ್ಲ? ದಕ್ಷಿಣದ ಸಿನಿಮಾಗಳ ಜೊತೆ ಕನ್ನಡ ಚಿತ್ರರಂಗವನ್ನೂ ಒಂದೇ ರೀತಿ ನೋಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಮುಂದೂಡಿಕೆಯಾಯ್ತು ಮಾನ್ಸೂನ್ ರಾಗ