Publish Date: Sat, 13 Aug 2022 (10:10 IST)
Updated Date: Sat, 13 Aug 2022 (10:19 IST)
ಬೆಂಗಳೂರು: ರಿಷಬ್ ಶೆಟ್ಟಿ ನಾಯಕರಾಗಿರುವ ಕಾಂತಾರ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯಿದೆ. ಹೊಸತನದ ಸಿನಿಮಾ ಮಾಡುವ ರಿಷಬ್ ಶೆಟ್ಟಿ ಕಾಂತಾರ ಬಗ್ಗೆ ಹೊಂಬಾಳೆ ಫಿಲಂಸ್ ಹೊಸ ಅಪ್ ಡೇಟ್ ಕೊಟ್ಟಿದೆ.
ಕಾಂತಾರ ಸಿನಿಮಾದ ಮೊದಲ ಹಾಡು ಸಿಂಗಾರ ಸಿರಿಯೆ ಆಗಸ್ಟ್ 15 ರಂದು ಅಂದರೆ ಸ್ವಾತಂತ್ರ್ಯೋತ್ಸವದಂದು ಲಾಂಚ್ ಆಗಲಿದೆ. ಸೋಮವಾರ 12.58 ಕ್ಕೆ ಸಿನಿಮಾದ ಹಾಡು ಬಿಡುಗಡೆಯಾಗಲಿದೆ.
ಕಂಬಳ ಹಿನ್ನಲೆಯ ಕರಾವಳಿಯ ಕತೆಯಿರುವ ಹೊಂಬಾಳೆ ಸಿನಿಮಾದ ಟೀಸರ್ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಸಿನಿಮಾ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ.