ಬೆಂಗಳೂರು: 'ಮನಸಾರೆ' ಸಿನಿಮಾದಲ್ಲಿ ಜತೆಯಾಗಿ ನಟಿಸಿದ ದಿಗಂತ್ ಹಾಗೂ ಐಂದ್ರಿತಾ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ದಿಗಂತ್ ನಟನೆಯ 'ಕಥೆಯೊಂದು ಶುರುವಾಗಿದೆ' ಸಿನಿಮಾವನ್ನು ನಟಿ ಐಂದ್ರಿತಾ ಕೂಡ ನೋಡಿದ್ದಾರೆ. ದಿಗಂತ್ ಸಿನಿಮಾದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಸಿನಿಮಾ ಮುಗಿದ ಮೇಲೆ ಮಾಧ್ಯಮದವರ ಕಡೆಯಿಂದ 'ನಿಮ್ಮ ಮದುವೆ ಯಾವಾಗ ?' ಪ್ರಶ್ನೆ ದಿಗಂತ್, ಐಂದ್ರಿತಾ ಕಡೆ ತೂರಿ ಬಂತು. ಅದಕ್ಕೆ ಅವರು ಕೊಟ್ಟ ಉತ್ತರ ಹೀಗಿದೆ ನೋಡಿ ‘ನನ್ನ ಕಥೆ ಸದ್ಯದಲ್ಲಿಯೇ ಶುರು ಆಗಲಿದೆ ‘ ''ಕಥೆಯೊಂದು ಶುರುವಾಗಿದೆ' ಸಿನಿಮಾ ಬಿಡುಗಡೆಯಾಗುತ್ತಿದೆ. ಅದೇ ರೀತಿ ನನ್ನ ಕಥೆ ಕೂಡ ಸದ್ಯದಲ್ಲಿಯೇ ಶುರು ಆಗಲಿದೆ. ಈ ಚಿತ್ರ ನನಗೆ ಹತ್ತಿರ ಆಯ್ತು. ಯಾಕೆಂದರೆ, ಚಿತ್ರದ ನಾಯಕ ತರುಣ್ ಗೂ ಮದುವೆ ಆಗಿರುವುದಿಲ್ಲ. ಅವನು ಲೈಫ್ ಪಾರ್ಟ್ನರ್ ಹುಡುಕುತ್ತ ಇರುತ್ತಾನೆ. ನನಗೆ ಲೈಫ್ ಪಾರ್ಟ್ನರ್ ಸಿಕ್ಕಿದ್ದಾರೆ. ನಮ್ಮದು ಸದ್ಯದಲ್ಲಿಯೇ’ ಎಂದು ದಿಗಂತ್ ಹೇಳಿದ್ದಾರೆ.
ಇನ್ನೂ ಮದುವೆ ದಿನಾಂಕದ ಬಗ್ಗೆ ಕೇಳಿದ ಪ್ರಶ್ನೆಗೆ 'ಇದೇ ದಿನ ಅಂತ ಇನ್ನೂ ಫಿಕ್ಸ್ ಆಗಿಲ್ಲ. ಬಹುಷಃ ಡಿಸೆಂಬರ್ ವೇಳೆಗೆ ಆಗಬಹುದು’ ಎಂದು ಹೇಳಿದ್ದಾರೆ.
ಇನ್ನೂ ಈ ಕುರಿತು ಮಾತನಾಡಿದ 'ಈಗ 'ಕಥೆಯೊಂದು ಶುರುವಾಗಿದೆ' ಸಿನಿಮಾದ ಬಗ್ಗೆ ಮಾತ್ರ ಮಾತಾಡೋಣ. ನಮ್ಮ ಕಥೆ ಶುರುವಾಗಿ 9 ವರ್ಷ ಆಯ್ತು ಇನ್ನು ನಡೆಯುತ್ತಿದೆ. ನಂತರ 'ನಮ್ಮ ಮದುವೆ ಡೇಟ್ ಇನ್ನೂ ಫಿಕ್ಸ್ ಆಗಿಲ್ಲ. ಆದಾಗ ನಾನೇ ಅನೌನ್ಸ್ ಮಾಡುತ್ತೇನೆ.'ಎಂದು ದಿಗಂತ್ ಮುಖ ನೋಡಿದರು. ಇಬ್ಬರ ಮುಖದಲ್ಲಿಯೂ ನಗು ಮನೆಮಾಡಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ