Publish Date: Thu, 28 Jul 2022 (16:06 IST)
Updated Date: Thu, 28 Jul 2022 (16:08 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಇಂದು ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಈ ನಡುವೆ ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್ ಲೈನ್ ನಲ್ಲಿ ಸೋರಿಕೆಯಾದ ಮಾಹಿತಿ ಬಂದಿದೆ.
ಪೈರಸಿ ತಡೆಗೆ ಚಿತ್ರತಂಡ ಸಾಕಷ್ಟು ಪ್ರಯತ್ನ ನಡೆಸಿತ್ತು. ಪೈರಸಿ ತಡೆ ತಂಡದ ಜೊತೆ ಕೈ ಜೋಡಿ ನಿಯಂತ್ರಣ ಹೇರಲು ಯತ್ನಿಸಿತ್ತು. ಅಲ್ಲದೆ, ಸಿನಿಮಾ ದೃಶ್ಯಗಳು ಆನ್ ಲೈನ್ ನಲ್ಲಿ ಸೋರಿಕೆಯಾಗಿದ್ದು ಕಂಡುಬಂದರೆ ತಕ್ಷಣವೇ ಮಾಹಿತಿ ಕೊಡಿ ಎಂದು ವ್ಯಾಟ್ಸಪ್ ಸಂಖ್ಯೆಯನ್ನೂ ನೀಡಲಾಗಿತ್ತು.
ಹಾಗಿದ್ದರೂ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿನಿಮಾ ಆನ್ ಲೈನ್ ನಲ್ಲಿ ಸೋರಿಕೆಯಾಗಿರುವುದು ವಿಪರ್ಯಾಸ. ಇದು ನಿರ್ಮಾಪಕರಿಗೆ ನಷ್ಟವುಂಟು ಮಾಡಲಿದೆ.