Publish Date: Thu, 08 Jul 2021 (10:44 IST)
Updated Date: Thu, 08 Jul 2021 (10:14 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಆಗಸ್ಟ್ 19 ಕ್ಕೆ ರಿಲೀಸ್ ಆಗುವುದೆಂದು ಈ ಮೊದಲು ತೀರ್ಮಾನವಾಗಿತ್ತು. ಆದರೆ ಅದೀಗ ಬದಲಾಗಿದೆ.
ಲಾಕ್ ಡೌನ್ ನಿಂದಾಗಿ ಥಿಯೇಟರ್ ತೆರೆದಿಲ್ಲ. ಒಂದು ವೇಳೆ ಥಿಯೇಟರ್ ತೆರೆದರೂ ಸುದೀಪ್ ಅಭಿನಯದ ಕೋಟಿಗೊಬ್ಬ 3 ಮೊದಲು ರಿಲೀಸ್ ಆಗುವ ಸಾಧ‍್ಯತೆಯಿದೆ.
ಬಹುಭಾಷೆಗಳಲ್ಲಿ ತೆರೆ ಕಾಣಲಿರುವ ವಿಕ್ರಾಂತ್ ರೋಣ 3ಡಿ ಫಾರ್ಮ್ಯಾಟ್ ನಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಿ ರಿಲೀಸ್ ಆಗಲಿದೆ. ಹೀಗಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಮಯ ಹಿಡಿಯುತ್ತಿದೆ. ಹೀಗಾಗಿ ಚಿತ್ರ ಬಿಡುಗಡೆ ಮುಂದಕ್ಕೆ ಹೋಗುವುದು ಪಕ್ಕಾ ಎಂದು ನಿರ್ದೇಶಕ ಅನೂಪ್ ಭಂಡಾರಿ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.