Publish Date: Thu, 08 Jul 2021 (10:31 IST)
Updated Date: Thu, 08 Jul 2021 (10:06 IST)
ಬೆಂಗಳೂರು: ಎಲ್ಲಾ ಸರಿ ಹೋಗಿದ್ದರೆ ಕೆಜಿಎಫ್ 2 ಸಿನಿಮಾ ಜುಲೈ 16 ಕ್ಕೆ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಎಲ್ಲವನ್ನೂ ತಲೆಕಳಗಾಗಿಸಿದೆ.
ಕೆಜಿಎಫ್ 2 ಸಿನಿಮಾ ಹೊಸ ರಿಲೀಸ್ ಡೇಟ್ ಯಾವಾಗ ಇರಬಹುದು ಎಂಬುದು ಈಗ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ವಿಚಾರ.
ಇದರ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಸುಳಿವು ನೀಡಿದ್ದು, ಸದ್ಯದಲ್ಲೇ ಹೊಸ ಡೇಟ್ ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ. ಕೆಲವೆಡೆ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಬಹುದು ಎಂಬ ಸುದ್ದಿ ಈಗಾಗಲೇ ಓಡಾಡುತ್ತಿದೆ. ಎಲ್ಲದಕ್ಕೂ ಚಿತ್ರತಂಡ ಸದ್ಯದಲ್ಲೇ ಉತ್ತರ ಕೊಡಲಿದೆ.