ಚೆನ್ನೈ : ಕಾಲಿವುಡ್ ನ ಸ್ಟಾರ್ ಹೀರೋ ವಿಜಯ್ ಅವರ ಮಾಸ್ಟರ್ ಚಿತ್ರ ಜನವರಿ 13ರಂದು ವಿಶ್ಚದಾದ್ಯಂತ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿತ್ತು. ತೆಲುಗು , ಹಿಂದಿಯಲ್ಲೂ ಈ ಚಿತ್ರ ಉತ್ತಮ ಪ್ರದರ್ಶನ ಕಂಡಿದೆ.
ಈ ಚಿತ್ರದ ಬಿಡುಗಡೆಯ ವೇಳೆ ಚಿತ್ರಮಂದಿರದಲ್ಲಿ 50%ನಷ್ಟು ಸೀಟು ಹಾಕಲು ಅನುಮತಿ ನೀಡಲಾಗತ್ತು. ಆದರೂ ಚಿತ್ರ ಮೊದಲ 2 ವಾರಗಳಲ್ಲಿ 250 ಕೋಟಿರೂ ಸಂಗ್ರಹ ಮಾಡಿದೆ.
ಆದರೆ ಈ ಚಿತ್ರ ಬಿಡುಗಡೆಯಾದ ಕೇವಲ 16ದಿನಗಳ ನಂತರ ಜನವರಿ 29ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಯತು. ಇದರಿಂದ ನಟ ವಿಜಯ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಅವರ ಅಭಿಮಾನಿಗಳಿಗೆ ಕೂಡ ತೀವ್ರ ನಿರಾಶೆಯಾಗಿದೆ ಎನ್ನಲಾಗಿದೆ.