Publish Date: Wed, 14 Oct 2020 (09:01 IST)
Updated Date: Wed, 14 Oct 2020 (09:03 IST)
ಚೆನ್ನೈ : ಬಿಜೆಪಿ ಕಾಲಿವುಡ್ ನಿಂದ ಹಲವಾರು ಸೆಲೆಬ್ರಿಟಿಗಳನ್ನು ತನ್ನ ಮಡಿಲಿಗೆ ಸೆಳೆಯುತ್ತಿದೆ. ಅದರಂತೆ ಇದೀಗ ನಟ ವಿಜಯ್ ಅವರ ತಂದೆ ಎಸ್.ಎ.ಚಂದ್ರಶೇಖರ್ ಕೂಡ ಬಿಜೆಪಿಗೆ ಸೇರಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಹೌದು. ಈಗಾಗಲೇ ಬಿಜೆಪಿಗೆ ಗಂಗೈ ಅಮರನ್, ಗೌತಮಿ, ರಾಧಾ ರವಿ, ಕಸ್ತೂರಿ ರಾಜ, ಗಾಯತ್ರಿ ರಘುರಾಮ್ ಮತ್ತು ಎಸ್.ವಿ.ಶೇಖರ್ ಸೇರಿದ್ದರು. ಹಾಗೇ ಇತ್ತಿಚೆಗೆ ನಟಿ ಖುಷ್ಬೂ ಕೂಡ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದಾರೆ. ಆದರೆ ಇದೀಗ ತಲಪತಿ ವಿಜಯ್ ಅವರ ತಂದೆ ಎಸ್.ಎ.ಚಂದ್ರಶೇಖರ್ ಕೂಡ ಬಿಜೆಪಿಗೆ ಸೇರಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹರಿದಾಡುತ್ತಿದೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಎ.ಚಂದ್ರಶೇಖರ್, ಇದು ಕೇವಲ ವದಂತಿಯಾಗಿದೆ. ಸದ್ಯಕ್ಕೆ ರಾಜಕೀಯ ಪ್ರವೇಶಿಸುವ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
pavithra
Publish Date: Wed, 14 Oct 2020 (09:01 IST)
Updated Date: Wed, 14 Oct 2020 (09:03 IST)