Publish Date: Wed, 14 Oct 2020 (08:41 IST)
Updated Date: Wed, 14 Oct 2020 (08:43 IST)
ಚೆನ್ನೈ : ಕಳೆದ ಕೆಲವು ದಿನಗಳಿಂದ ತಲಪತಿ ವಿಜಯ್, ಅಜಿತ್, ರಜನೀಕಾಂತ್ ಅವರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಬಂದಿತ್ತು. ಅದೇ ರೀತಿ ಇದೀಗ ನಟ ಧನುಷ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಬಂದಿದೆ ಎನ್ನಲಾಗಿದೆ.
ಪೊಲೀಸ್ ಕಂಟ್ರೋಲ್ ರೂಂಗೆ ನಟ ಧನುಷ್ ಅವರ ಚೆನ್ನೈ ನ ಅಭಿರಾಮಪುರಂ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ಕರೆ ಬಂದಿದ್ದು, ತಕ್ಷಣ ಪೊಲೀಸರು ಶ್ವಾನ ದಳದೊಂದಿಗೆ ಸ್ಥಳಕ್ಕೆ ಆಗಮಿಸಿ ಬಾಂಬ್ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಆದರೆ ಯಾವುದೇ ಬಾಂಬ್ ಪತ್ತೆಯಾಗದ ಹಿನ್ನಲೆಯಲ್ಲಿ ಕರೆ ಮಾಡಿದವರನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿದೆ ಎನ್ನಲಾಗಿದೆ.
ಈ ವೇಳೆ ಧನುಷ್ ಅವರು ಆನಂದ್ ಎಲ್ ರಾಯ್ ನಿರ್ದೇಶನದ ಹಿಂದಿ ಚಿತ್ರ ‘ಅಟ್ರಂಗಿ ರೇ’ ಶೂಟಿಂಗ್ ಗಾಗಿ ಮಧುರೈನಲ್ಲಿದ್ದು, ವಿಷಯ ತಿಳಿಯುತ್ತಿದ್ದಂತೆ ಕುಟುಂಬ ಸದಸ್ಯರ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾಗಿದೆ.