ಚೆನ್ನೈ : ವಿಜಯ್ ಅವರ ಮಾಸ್ಟರ್ ಚಿತ್ರ ಜನವರಿ 13ರಂದು ಬಿಡುಗಡೆಯಾಗಲಿದೆ. ಹಾಗಾಗಿ ವಿಜಯ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ನಡುವೆ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.
ಹೌದು. ಇತ್ತೀಚೆಗೆ ವಿಜಯ್ ಮುಖ್ಯಮಂತ್ರಿ ಪಳನಿಸ್ವಾಮಿಯನ್ನು ಭೇಟಿಯಾಗಿ ಅಭಿಮಾನಿಗಳಿಗೆ ಚಿತ್ರಮಂದಿರಗಳಲ್ಲಿ 100% ಸೀಟುಗಳನ್ನು ನೀಡಲು ಅನುಮತಿ ನೀಡಬೇಕೆಂದು ಕೇಳಿಕೊಂಡಿದ್ದಾರೆ.
ಆದರೆ ಈಗ ತಮಿಳುನಾಡಿನಲ್ಲಿ ಕರ್ಪ್ಯೂ ಅನ್ನು ಜನವರಿ 31ಕ್ಕೆ ವಿಸ್ತರಿಸಲಾಗಿದೆ. ಹಾಗಾಗಿ ಚಿತ್ರಮಂದಿರಗಳಲ್ಲಿ ಶೇ.50% ಸೀಟುಗಳನ್ನು ನೀಡಲು ಅನುಮತಿ ನೀಡಲಾಗಿದೆ. ಇದು ವಿಜಯ್ ಅಭಿಮಾನಿಗಳಲ್ಲಿ ನಿರಾಶೆಯನ್ನು ಮೂಡಿಸಿದೆ ಎನ್ನಲಾಗಿದೆ.