ಚೆನ್ನೈ : ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ಕಮಾಂಡರ್ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 13ರಂದು ಬಿಡುಗಡೆಯಾಲಿದೆ ಎನ್ನಲಾಗಿದೆ.
ಆದರೆ ಮಾಸ್ಟರ್ ಚಿತ್ರ ಬಿಡುಗಡೆಗೂ ಮುನ್ನ ಈ ಚಿತ್ರವು ಹಾಲಿವುಡ್ ಚಿತ್ರದ ಪ್ರತಿ ಎಂದು ಅನೇಕರು ಹೇಳುವುದರ ಮೂಲಕ ವಿವಾದ ಸೃಷ್ಟಿಸಿದ್ದಾರೆ. ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಇದೀಗ ಈ ವಿವಾದದಕ್ಕೆ ತೆರೆ ಎಳೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಸ್ಟರ್ ಚಿತ್ರವು ಹಾಲಿವುಡ್ ಫೈಟ್ ಕ್ಲಬ್ ಚಿತ್ರದ ಪ್ರತಿ ಅಲ್ಲ. ಈ ಚಿತ್ರದ ಕಥೆ ನಾನು ವೈಯಕ್ತಿಕವಾಗಿ ಭೇಟಿಯಾದ ವ್ಯಕ್ತಿಯ ಸ್ಫೂರ್ತಿ ಮತ್ತು ನನ್ನ ಸ್ವಂತ ಕಲ್ಪನೆಯ ಸಮ್ಮಿಲನವಾಗಿದೆ ಎಂದು ತಿಳಿಸಿದ್ದಾರೆ.