Publish Date: Sat, 15 May 2021 (10:26 IST)
Updated Date: Sat, 15 May 2021 (10:27 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಲಾಕ್ ಡೌನ್ ಸಮಯದಲ್ಲಿ ಬಡವರು, ಸಂಕಷ್ಟಕ್ಕೀಡಾದವರಿಗೆ ನೆರವು ನೀಡಲು ಮುಂದಾಗಿದ್ದಾರೆ.
ದಾನಿಗಳ ನೆರವಿನಿಂದ ಉಪೇಂದ್ರ ತಮ್ಮ ನೇತೃತ್ವದಲ್ಲಿ ಕೊರೋನಾದಿಂದ ಸಂಕಷ್ಟಕ್ಕೀಡಾದ ಕಾರ್ಮಿಕರು, ಬಡವರಿಗೆ ಆಹಾರ ಕಿಟ್ ವಿತರಿಸಿದ್ದಾರೆ.
ತಮ್ಮ ಮನೆಯ ಎದುರು ಸಾಮಾಜಿಕ ಅಂತರ ಕಾಯ್ದುಕೊಂಡು ಅರ್ಹರಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಇದು ಇನ್ನೂ ಮುಂದುವರಿಯುವ ನಿರೀಕ್ಷೆಯಿದೆ. ಈಗಾಗಲೇ ಹಲವು ಸ್ಯಾಂಡಲ್ ವುಡ್ ಕಲಾವಿದರೂ ಉಪೇಂದ್ರ ಕೆಲಸಕ್ಕೆ ದೇಣಿಗೆ ಮೂಲಕ ನೆರವಾಗಿದ್ದರು.