Publish Date: Sat, 15 May 2021 (08:35 IST)
Updated Date: Sat, 15 May 2021 (08:38 IST)
ಬೆಂಗಳೂರು: ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಕಿರುತೆರೆಯ ಖ್ಯಾತ ಜೋಡಿ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಈಗ ಸದ್ದಿಲ್ಲದೇ ವಿವಾಹವಾಗಿದ್ದಾರೆ.
ಕೊರೋನಾ ಕಾರಣದಿಂದ ಸೀಮಿತ ಜನರ ನಡುವೆ ಮನೆಯಲ್ಲಿಯೇ ಈ ವಿವಾಹ ಕಾರ್ಯಕ್ರಮ ನೆರವೇರಿದೆ. ಈ ಬಗ್ಗೆ ಚಂದನ್ ಆಗಲಿ, ಕವಿತಾ ಆಗಲೀ ಯಾವುದೇ ಸುಳಿವೂ ಬಿಟ್ಟುಕೊಟ್ಟಿರಲಿಲ್ಲ.
ಮಾಸ್ಕ್ ಹಾಕಿಕೊಂಡೇ ಚಂದನ್ ಕವಿತಾ ಗೌಡ ಜೊತೆ ಸಪ್ತಪದಿ ತುಳಿದಿರುವುದು ವಿಶೇಷ. ನಿನ್ನೆ ಸಂಜೆ ವೇಳೆಗೆ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋ ಪ್ರಕಟಿಸಿದ ಚಂದನ್ ಮನೆ ಮದುವೆ, ಮದುವೆ ಮನೆ. ಯಾವುದೇ ವೈಭವಗಳಿರಲಿಲ್ಲ, ಆದರೆ ನಮ್ಮ ಮದುವೆಯಲ್ಲಿ ಸಂತೋಷ ತುಂಬಿತ್ತು ಎಂದು ಚಂದನ್ ಬರೆದುಕೊಂಡಿದ್ದಾರೆ.