Publish Date: Mon, 28 Mar 2022 (09:10 IST)
Updated Date: Mon, 28 Mar 2022 (09:20 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಎಂದರೆ ಯಾರು? ಒಟ್ಟೊಟ್ಟಿಗೆ ನಾಲ್ಕು ವಿಲನ್ ಗಳನ್ನು ಹೊಡೆದುರುಳಿಸುವ ಸಿನಿಮಾ ಹೀರೋ. ಆದರೆ ನಿಜ ಜೀವನದಲ್ಲಿ ಅವರೂ ಮನೆಯಲ್ಲಿ ಕಸ ಗುಡಿಸಿ, ಹೆಂಡ್ತಿ ಸೇವೆ ಮಾಡ್ತಾರಂತೆ!
ಹೀಗಂತ ಸ್ವತಃ ಪ್ರಿಯಾಂಕ ಉಪೇಂದ್ರ ವಿಡಿಯೋ ಸಮೇತ ಪ್ರಕಟಿಸಿದ್ದಾರೆ. ಈ ವಿಡಿಯೋದಲ್ಲಿ ಉಪೇಂದ್ರ ತಮ್ಮ ಮನೆಯಲ್ಲಿ ಕಸ ಗುಡಿಸಿ, ನೆಲ ಒರೆಸಿ, ಪಾತ್ರೆ ಬೆಳಗಿ, ಪತ್ನಿ ಪ್ರಿಯಾಂಕಗೆ ಹೆಡ್ ಮಸಾಜ್ ಮಾಡಿ, ಬಟ್ಟೆ ಎಲ್ಲಾ ಒಣಗಲು ಹಾಕುತ್ತಾರೆ.
ಆದರೆ ಇದೆಲ್ಲಾ ಮಾಡಿರುವುದು ಹೋಂ ಮಿನಿಸ್ಟರ್ ಸಿನಿಮಾ ಪ್ರಚಾರಾರ್ಥವಾಗಿ. ಸಿನಿಮಾ ಪ್ರಚಾರಕ್ಕಾಗಿ ಗಂಡಸರಿಗೆ ಚಾಲೆಂಜ್ ನೀಡಲಾಗಿದೆ. ಅದರಂತೆ ಉಪೇಂದ್ರ ಮನೆ ಕೆಲಸ ಮಾಡುವ ವಿಡಿಯೋ ಪ್ರಕಟಿಸಿರುವ ಪ್ರಿಯಾಂಕ ನೀವೂ ಈ ಚಾಲೆಂಜ್ ಸ್ವೀಕರಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಏನೇ ಆದರೂ ಈ ರೀತಿ ವಿಶಿಷ್ಟವಾಗಿ ಸಿನಿಮಾ ಪ್ರಮೋಷನ್ ಮಾಡಿದ್ದು ಅಭಿಮಾನಿಗಳಿಗೆ ಇಷ್ಟವಾಗಿದೆ.