Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಟ್ರೈಲರ್ ಇಂದು ಲಾಂಚ್ ಆಗಿದ್ದು, ಟ್ರೈಲರ್ ವೀಕ್ಷಿಸಿದ ಪ್ರೇಕ್ಷಕರು ಭರ್ಜರಿ ಖುಷಿಪಟ್ಟಿದ್ದಾರೆ.
ಟ್ರೈಲರ್ ನಲ್ಲಿರುವ ಆಕ್ಷನ್ ದೃಶ್ಯಗಳು, ಹಿನ್ನಲೆ ಸಂಗೀತ, ಪವರ್ ಫುಲ್ ಡೈಲಾಗ್ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಟ್ರೈಲರ್ ನೋಡಿದರೆ ಥಿಯೇಟರ್ ನಲ್ಲಿ ಇದರ ಇಫೆಕ್ಟ್ ಯಾವ ಲೆವೆಲ್ ಗೆ ಇರಬಹುದು ಎಂದು ಗೊತ್ತಾಗುತ್ತದೆ ಎಂದು ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕ ಮೆಚ್ಚಿದ್ದಾರೆ.
ಇನ್ನು, ಇಂದು ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ಸಂಜಯ್ ದತ್, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು, ಮಾಳವಿಕಾ ಅವಿನಾಶ್, ಶ್ರೀನಿಧಿ ಶೆಟ್ಟಿ ಮುಂತಾದ ಘಟನಾನುಘಟಿ ತಾರೆಯರಿದ್ದರು. ಕಾರ್ಯಕ್ರಮವನ್ನು ಕನ್ನಡದಲ್ಲಿ ಆಂಕರ್ ಅನುಶ್ರೀ ಮತ್ತು ಪರಭಾಷಿಕರಿಗಾಗಿ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ನಿರೂಪಿಸಿದರು.