Publish Date: Fri, 21 Oct 2022 (08:30 IST)
Updated Date: Fri, 21 Oct 2022 (09:00 IST)
ಬೆಂಗಳೂರು: ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯನ್ನೂ ಒದಗಿಸಲಿದೆ.
ಪುನೀತ್ ಗೆ ನಮನ ಸಲ್ಲಿಸುವ ಉದ್ದೇಶದಿಂದ ಹಲವು ಸಿನಿಮಾ ರಂಗದ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದರ ಜೊತೆಗೆ ಮೂವರು ಖ್ಯಾತ ತಾರೆಯರಿಂದ ಡ್ಯಾನ್ಸ್ ಪರ್ಫಾರ್ಮೆನ್ಸ್ ಇರಲಿದೆ.
ಭಾರತದ ಮೈಕಲ್ ಜ್ಯಾಕ್ಸನ್ ಖ್ಯಾತಿಯ ಪ್ರಭುದೇವ, ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಮತ್ತು ಮೋಹಕ ತಾರೆ ರಮ್ಯಾ ಇಂದು ಲೈವ್ ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ. ವಿಶೇಷವೆಂದರೆ ಪುನೀತ್ ಪಾಲಿಗೆ ಫೇವರಿಟ್ ಹೀರೋಯಿನ್ ಆಗಿದ್ದ ರಮ್ಯಾ ಬಹಳ ಸಮಯದ ನಂತರ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅದೂ ಅಪ್ಪು ಕಾರ್ಯಕ್ರಮದ ಮೂಲಕವೇ ಜನರ ಎದುರಿಗೆ ಬರುತ್ತಿರುವುದು ವಿಶೇಷ. ಅಭಿಮಾನಿಗಳು ಈ ಕ್ಷಣಗಳನ್ನು ಲೈವ್ ಆಗಿ ಕಣ್ತುಂಬಿಕೊಳ್ಳಬಹುದು.
-Edited by Rajesh Patil