Publish Date: Fri, 21 Oct 2022 (08:10 IST)
Updated Date: Fri, 21 Oct 2022 (08:47 IST)
ಬೆಂಗಳೂರು: ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಗಂಧದ ಗುಡಿ ಸಾಕ್ಷ್ಯಚಿತ್ರದ ಪ್ರಿ ರಿಲೀಸ್ ಈವೆಂಟ್ ಇಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿನ ನೆರವೇರಲಿದೆ.
ಸಂಜೆ 6 ಗಂಟೆಯಿಂದ ಕಾರ್ಯಕ್ರಮಗಳು ಆರಂಭವಾಗಲಿದೆ. ಕೃಷ್ಣ ವಿಹಾರ, ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದ್ದು, ಸಿಎಂ ಬೊಮ್ಮಾಯಿ, ವಿವಿಧ ಭಾಷೆಯ ಸಿನಿಮಾ ರಂಗದ ದಿಗ್ಗಜರು ಭಾಗಿಯಾಗಲಿದ್ದಾರೆ.
ಕರ್ನಾಟಕದ ವನಸಂಪತ್ತನ್ನು ಪರಿಚಯಿಸುವ ಗಂಧದ ಗುಡಿ ಸಾಕ್ಷ್ಯಚಿತ್ರ ಅಕ್ಟೋಬರ್ 28 ಕ್ಕೆ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಪ್ರೀತಿಯ ಅಪ್ಪುವನ್ನು ಕೊನೆಯ ಬಾರಿ ತೆರೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ. ಹೀಗಾಗಿ ಈ ಸಾಕ್ಷ್ಯಚಿತ್ರ ಎಲ್ಲರ ಪಾಲಿಗೆ ವಿಶೇಷವಾಗಿದೆ.
-Edited by Rajesh Patil