Publish Date: Wed, 26 Jan 2022 (09:25 IST)
Updated Date: Wed, 26 Jan 2022 (09:37 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಆದರೆ ಈಗ ಚಿತ್ರತಂಡ ಸಾಂಗ್ ಟೀಸರ್ ಬಿಡುಗಡೆ ಮಾಡಿದ್ದು ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.
ಸಿನಿಮಾದ ಟೀಸರ್ ಸಾಂಗ್ ನಲ್ಲಿ ಕನ್ನಡಕ್ಕಿಂತ ಹಿಂದಿ, ಉರ್ದು ಪದ ಬಳಕೆ ಮಾಡಿರುವುದು ಟೀಕೆಗೆ ಗುರಿಯಾಗಿದೆ. ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಹಾಗಂತ ಈ ಮಟ್ಟಿಗೆ ಕನ್ನಡ ಮರೆತು ಪರಭಾಷೆಯ ಲಿರಿಕ್ಸ್ ಬಳಸುವ ಅಗತ್ಯವಿತ್ತೇ ಎನ್ನುವುದು ಅಭಿಮಾನಿಗಳ ಪ್ರಶ್ನೆ.
ಸದಾ ಕನ್ನಡ ನಾಡು, ನುಡಿ ಎನ್ನುವ ನವರಸನಾಯಕ ಜಗ್ಗೇಶ್ ಈ ಹಾಡನ್ನು ಹೇಗೆ ಒಪ್ಪಿಕೊಂಡರು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.