ಬೆಂಗಳೂರು: ಬಿಗ್ ಬಾಸ್ 8 ನೇ ಆವೃತ್ತಿ ಮುಗಿದ ಬಳಿಕ ವೀಕ್ಷಕರನ್ನು ಮನರಂಜಿಸಲು ಧಾರವಾಹಿ ಕಲಾವಿದರನ್ನಿಟ್ಟುಕೊಂಡು ಕಲರ್ಸ್ ವಾಹಿನಿ ಮಿನಿ ಬಿಗ್ ಬಾಸ್ ಸೀಸನ್ ಆರಂಭಿಸಿತ್ತು.
ಆರಂಭದಲ್ಲಿ ಇದು ಕೇವಲ ಆರು ದಿನಗಳ ಶೋ ಎಂದಿದ್ದರೂ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಎರಡು ವಾರಕ್ಕೆ ವಿಸ್ತರಿಸಲಾಯಿತು.
ಈ ವಾರ ಅಂತೂ ಮಿನಿ ಸೀಸನ್ ಗೆ ತೆರೆ ಬೀಳುವ ಸಮಯ ಬಂದಿದೆ. ಕಿಚ್ಚ ಸುದೀಪ್ ನಿರೂಪಕರಾಗಿ ಮತ್ತೆ ತೆರೆ ಮೇಲೆ ಬರಲಿದ್ದಾರೆ. ಪ್ರತಿಯೊಬ್ಬ ಕಲಾವಿದರನ್ನೂ ಮಾತನಾಡಿಸಿ ಬಿಗ್ ಬಾಸ್ ಅನುಭವಗಳನ್ನು ಕೇಳಲಿದ್ದಾರೆ. ಬಳಿಕ ಬೆಸ್ಟ್ ಪರ್ಫಾರ್ಮರ್ ಯಾರೆಂದು ಆಯ್ಕೆ ಮಾಡಲಿದ್ದಾರೆ. ಈ ಮೂಲಕ ಬಿಗ್ ಬಾಸ್ ಮಿನಿ ಸೀಸನ್ ಅಂತ್ಯಗೊಳ್ಳಲಿದೆ.