ಅಕ್ಟೋಬರ್ 3ರಂದು ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಮೂಲಕ ಕನ್ನಡದ ಸ್ವೀಟಿ ರಾಧಿಕಾ ಮತ್ತೇ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅಘೋರಿ ಲುಕ್ನಲ್ಲಿ ಹೊಸ ಅವತಾರ ತಾಳಿದ್ದಾರೆ.
ಕೊರೊನಾ ಬರುವ ಮುಂಚೆನೆ ಶುರುವಾಗಿದ್ದ ಈ ಸಿನಿಮಾ ಇದೀಗ ಹೊಸ ಭರವಸೆಯನ್ನು ಮೂಡಿಸುತ್ತಿದೆ. ನಿನ್ನೆ ನಡೆದ ಸಿನಿಮಾ ಟ್ರೇಲರ್ ಲಾಂಚ್ ವೇಳೆ ರಾಧಿಕಾ ಕುಮಾರಸ್ವಾಮಿ ತಮ್ಮ ಸಿನಿ ಜರ್ನಿ ನೆನೆದು ಭಾವುಕರಾಗಿದ್ದಾರೆ.
ಈ ಸಿನಿಮಾ ಸಕ್ಸಸ್ ಆದರೆ ಮತ್ತೇ ಸಿನಿಮಾದಲ್ಲಿ ಅಭಿನಯ ಮಾಡ್ತೀನಿ, ಇಲ್ಲದಿದ್ರೆ ಇದೇ ನನ್ನ ಕೊನೆ ಸಿನಿಮಾ ಅಂತಾ ಅಂದು ಡೈರೆಕ್ಟರ್ ಜತೆ ಹೇಳಿದ್ದೆ. ಅದೇ ಮಾತನ್ನು ಇಂದು ಹೇಳ್ತಾ ಇದ್ದೀನಿ. ಈ ಸಿನಿಮಾದಲ್ಲಿ ನನ್ನ ಅಭಿನಯವನ್ನು ಮೆಚ್ಚಿ, ಯಶಸ್ಸು ನೀಡಿದರೆ ಮಾತ್ರ ನಾನು ಮುಂದೆ ಬಣ್ಣ ಹಚ್ಚುತ್ತೀನಿ, ಇಲ್ಲದಿದ್ರೆ ಇದೇ ನನ್ನ ಕೊನೆ ಸಿನಿಮಾ ಆಗಿರುತ್ತದೆ ಎಂದು ಕಣ್ಣೀರು ಹಾಕಿದರು.
ನನಗೆ ಸಿನಿಮಾ ಮೇಲೆ ತುಂಬಾನೇ ನಂಬಿಕೆಯಿದೆ. ಎಲ್ಲರೂ ಕುಟುಂಬ ಸಮೇತ ಬಂದು ಸಿನಿಮಾ ನೋಡುವಂತಹ ಸಿನಿಮಾ ಎಂದರು. ಈ ಸಿನಿಮಾವನ್ನು ಶ್ರೀಜೈ ಅವರು ನಿರ್ದೇಶನ ಮಾಡಿದ್ದು, ಶಮಿಕಾ ಎಂಟರ್ಪ್ರೈಸಸ್ ಅಡಿಯಲ್ಲಿ ಚಿತ್ರ ಮೂಡಿಬಂದಿದೆ.
ಅಘೋರಿಯಾಗಿ ರಾಧಿಕಾ-ರವಿಶಂಕರ್, ಪೊಲೀಸ್ ಅಧಿಕಾರಿಯಾಗಿ ರಮೇಶ್ ಅರವಿಂದ್, ಅನುಪ್ರಭಾಕರ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿದೆ.