Select Your Language

Notifications

webdunia
webdunia
webdunia
webdunia

ಬರ್ತ್ ಡೇ ದಿನ ಮನೆಗೆ ಬರಲು ಅಡ್ರೆಸ್ ಕೊಟ್ಟ ನಟಿ ರಾಧಿಕಾ

ಬರ್ತ್ ಡೇ ದಿನ ಮನೆಗೆ ಬರಲು ಅಡ್ರೆಸ್ ಕೊಟ್ಟ ನಟಿ ರಾಧಿಕಾ
ಬೆಂಗಳೂರು , ಗುರುವಾರ, 9 ನವೆಂಬರ್ 2023 (16:00 IST)
ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡರೂ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇದೀಗ ಅಭಿಮಾನಿಗಳ ಜೊತೆ ಕಾಲ ಕಳೆಯಲು ರಾಧಿಕಾ ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ನವಂಬರ್ 11 ರಂದು ತಮ್ಮ ಹುಟ್ಟುಹಬ್ಬದ ದಿನ ಮನೆಯಲ್ಲಿಯೇ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ಮನೆಗೆ ಬರಲು ಪೂರ್ಣ ವಿಳಾಸವನ್ನೂ ಕೊಟ್ಟಿದ್ದಾರೆ.

ಹಲವು ವರ್ಷಗಳಿಂದ ನಿಮ್ಮೆಲ್ಲರನ್ನು ಭೇಟಿಯಾಗಲು ಸಾಧ‍್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ನಿಮ್ಮೊಂದಿಗೆ ಹುಟ್ಟುಹಬ್ಬ ಆಚರಿಸಲು ತೀರ್ಮಾನಿಸಿದ್ದೇನೆ. ನವಂಬರ್ 11 ರಂದು ಶನಿವಾರ ಮನೆಗೇ ಬರಬಹುದು. ಅಲ್ಲಿ ನಿಮಗೆ ಸಿಗುತ್ತೇನೆ ಎಂದು ರಾಧಿಕಾ ಮನೆ ಅಡ್ರೆಸ್ ಕೊಟ್ಟಿದ್ದಾರೆ. 10/11 ಎರಡನೇ ಮುಖ್ಯರಸ್ತೆ, ಎರಡನೇ ಕ್ರಾಸ್ ಆರ್ ಎಂವಿ ಸೆಕೆಂಡ್ ಸ್ಟೇಜ್, ಮೂರನೇ ಬ್ಲಾಕ್, ನ್ಯೂ ಬೆಲ್ ರೋಡ್, ಡಾಲರ್ಸ್ ಕಾಲೊನಿ, ಬೆಂಗಳೂರು. ಇದು ರಾಧಿಕಾ ಮನೆ ವಿಳಾಸವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಪ್ತಸಾಗರದಾಚೆ ಎಲ್ಲೊ 2 ನಡುವೆ ಮತ್ತೆರಡು ಸಿನಿಮಾ ಶೂಟಿಂಗ್ ಮುಗಿಸಿದ ರಕ್ಷಿತ್ ಶೆಟ್ಟಿ