Publish Date: Sun, 18 Oct 2020 (18:39 IST)
Updated Date: Sun, 18 Oct 2020 (18:42 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಕೇಸ್ ಗೆ ಸಂಬಂಧಿಸಿದಂತೆ ನ್ಯಾಯವಾದಿಯೊಬ್ಬರನ್ನು ಬಂಧನ ಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಕೀಲ ವಿಬೋರ್ ಆನಂದ ಎಂಬವರು ನಟ ಸುಶಾಂತ ಸಿಂಗ್ ರಜಪೂತ್, ಅರ್ಬಾಜ್ ಖಾನ್, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಸಚಿವ ಆದಿತ್ಯ ಠಾಕ್ರೆ ಸೇರಿದಂತೆ ಹಲವರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದರು.
ಇನ್ನು ನಟ ಸುಶಾಂತ ಸಿಂಗ್ ಮ್ಯಾನೇಜರ್ ದಿಶಾ ಸಾಲಿಯಾನ ಕೇಸ್ ಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದರು ಎನ್ನಲಾಗಿದೆ.