Publish Date: Fri, 05 Nov 2021 (16:15 IST)
Updated Date: Fri, 05 Nov 2021 (16:16 IST)
ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾದ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಇಂದು ತಮಿಳು ಸ್ಟಾರ್ ನಟ ಸೂರ್ಯ ಭೇಟಿಯಿತ್ತಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ವೇಳೆ ಜೊತೆಯಾಗಿದ್ದಾರೆ. ಪುನೀತ್ ಸಮಾಧಿ ಮುಂದೆ ಹಾರ ಹಾಕಿದಾಗ ಗೆಳೆಯನನ್ನು ನೆನೆದು ಭಾವುಕರಾದ ಸೂರ್ಯ ಕುಸಿದು ನಿಂತು ಕಣ್ಣೀರು ಹಾಕಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವಾಗಲೂ ಭಾವುಕರಾಗಿಯೇ ಮಾತನಾಡಿದ್ದಾರೆ. ಪುನೀತ್ ನನಗೆ 7 ತಿಂಗಳಾಗಿದ್ದಾಗಲೇ ಗೊತ್ತು. ನಮ್ಮ ಎರಡೂ ಕುಟುಂಬದವರು ಆತ್ಮೀಯ ಸಂಬಂಧ ಹೊಂದಿದ್ದೇವೆ. ಅವರ ಯಾವ ಫೋಟೋ, ವಿಡಿಯೋ ನೋಡಿದರೂ ನಗುತ್ತಲೇ ಇರುತ್ತಾರೆ. ಅವರಿಗೆ ಇಂಥಾ ಪರಿಸ್ಥಿತಿ ಬಂದಿದ್ದು ಇದು ನ್ಯಾಯವಲ್ಲ ಎಂದು ಸೂರ್ಯ ಕಣ್ಣೀರು ಹಾಕಿದ್ದಾರೆ. ಬಳಿಕ ಪುನೀತ್ ನಿವಾಸಕ್ಕೂ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.