Publish Date: Fri, 05 Nov 2021 (11:07 IST)
Updated Date: Fri, 05 Nov 2021 (11:08 IST)
ಬೆಂಗಳೂರು: ನಮ್ಮನ್ನನು ಅಗಲಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಬಿಬಿಎಂಪಿ ವಿಶಿಷ್ಟವಾಗಿ ಗೌರವ ಸಲ್ಲಿಸಲು ಮುಂದಾಗಿದೆ.
ಬೆಂಗಳೂರಿನ ವೆಸ್ಟ್ ಕಾರ್ಡ್ ರೋಡ್ ಅಥವಾ ಬಳ್ಳಾರಿ ರಸ್ತೆಗೆ ಪುನೀತ್ ಹೆಸರಿಟ್ಟು ಗೌರವ ಸೂಚಿಸಲು ಮುಂದಾಗಿದೆ. ಅಲ್ಲದೆ ಕೆಲವು ಮೈದಾನಗಳು, ಪಾರ್ಕ್ ಗಳಿಗೂ ಪುನೀತ್ ಹೆಸರಿಡಲು ಯೋಜನೆ ಹಾಕಿಕೊಂಡಿದೆ.
ಪುನೀತ್ ಸಾವನ್ನಪ್ಪಿದ ಬಳಿಕ ಅವರ ಅಭಿಮಾನಿಗಳು ಬಿಬಿಎಂಪಿಗೆ ಈ ಮನವಿ ಸಲ್ಲಿಸಿತ್ತು. ಇದೀಗ ಅಭಿಮಾನಿಗಳ ಒತ್ತಾಸೆಯಂತೆ ಬಿಬಿಎಂಪಿ ಅಗಲಿದ ನಟನಿಗೆ ಗೌರವ ಸಲ್ಲಿಸಲು ಮುಂದಾಗಿದೆ.