ಬೆಂಗಳೂರು: ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಹಿಜಬ್ ವಿವಾದದ ಬಗ್ಗೆ ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ.
ಸದ್ಯದ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿರುವವ ರಮ್ಯಾ, ಭಾರತದ ಯುವ ಸಮೂಹ ಈ ರೀತಿ ಧರ್ಮದ ಹೆಸರಿನಲ್ಲಿ ವಿಭಜನೆಯಾಗಿರುವುದು ನೋಡಲು ಬೇಸರವಾಗುತ್ತದೆ ಎಂದಿದ್ದಾರೆ.
ನಮ್ಮ ಶಾಲಾ ಜೀವನದ ಕಾಲದಲ್ಲಿ ನನ್ನ ಪಕ್ಕದಲ್ಲಿರುವವರು ಮುಸ್ಲಿಮರೋ, ಸಿಖ್ಖರೋ, ಪಾರ್ಸಿಗಳೋ, ಹಿಂದುಗಳೋ ಎನ್ನುವುದು ಮುಖ್ಯವಾಗುತ್ತಿರಲಿಲ್ಲ. ನನ್ನ ಪಕ್ಕದಲ್ಲಿರುವವರ ಬುತ್ತಿಯಲ್ಲಿ ಏನು ತಿಂಡಿ ಇರಬಹುದು ಎಂಬುದೇ ನಮಗೆ ಕುತೂಹಲದ ಸಂಗತಿಯಾಗಿರುತ್ತಿತ್ತು. ಈ ನಾನ್ಸ್ ಸೆನ್ಸ್ ಆರಂಭವಾಗಿದ್ದೆಲ್ಲಿ? ಎಂದು ರಮ್ಯಾ ಹೇಳಿಕೊಂಡಿದ್ದಾರೆ.