ಉದಯ್ ಮೆಹ್ತಾ ನಿರ್ಮಾಣ ಮಾಡಿರುವ ಮಹತ್ವಾಕಾಂಕ್ಷೆಯ ಚಿತ್ರ ಸಿಂಗ. ವಿಜಯ್ ಕಿರಣ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಸಿಂಗ ಬಿಡುಗಡೆಯ ಕಡೇಯ ಕ್ಷಣಗಳಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಇತ್ತೀಚೆಗೆ ಬಿಡುಗಡೆಯಾಗಿರೋ ಟ್ರೈಲರ್ನಲ್ಲಿ ಚಿರಂಜೀವಿ ಸರ್ಜಾ ಆಕ್ಷನ್ ಸೀನುಗಳಲ್ಲಿ ಅಬ್ಬರಿಸಿರೋ ರೀತಿಯೇ ಎಲ್ಲರೂ ಹುಬ್ಬೇರಿಸಿಸುವಂತೆ ಮಾಡಿದೆ. ಅಷ್ಟರ ಮಟ್ಟಿಗೆ ಕ್ರೇಜ್ ಸೃಷ್ಟಿಸಿರೋ ಸಿಂಗ ಇದೇ ಹತ್ತೊಂಬತ್ತರಂದು ಬಿಡುಗಡೆಯಾಗಲಿದೆ.
ಸಿಂಗ ಟ್ರೈಲರ್ ಕಂಡ ಪ್ರತಿಯೊಬ್ಬರಿಗೂ ಇದೊಂದು ಮಾಸ್ ಚಿತ್ರ ಅನ್ನೋದು ಖಾತರಿಯಾಗಿದೆ. ಆದರೆ ಈ ಸಿನಿಮಾ ಕಥೆಯನ್ನು ಹಾಗೆ ಒಂದು ಜಾನರಿಗಷ್ಟೇ ಸೀಮಿತಗೊಳಿಸುವಂತಿಲ್ಲ. ಯಾಕೆಂದರೆ ಇಂಥಾ ಹತ್ತಾರು ವಿಚಾರಗಳೊಂದಿಗೇ ಸಿಂಗ ಮೂಡಿ ಬಂದಿದೆ. ಮಾಸ್ ಪ್ರೇಕ್ಷಕರ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರಿಗೂ ಫುಲ್ ಮೀಲ್ಸ್ನಂಥಾ ಕಂಟೆಂಟಿನೊಂಡಿಗೆ ಸಿಂಗ ಚಿತ್ರ ರೂಪುಗೊಂಡಿದೆ.
ಇದು ಹಳ್ಳಿ ಹಿನ್ನೆಲೆಯಲ್ಲಿಯೇ ಘಟಿಸೋ ಕಥೆ ಹೊಂದಿರೋ ಸಿನಿಮಾ. ಇಲ್ಲಿ ಮೈ ನವಿರೇಳಿಸೋ ಆಕ್ಷನ್ ಚಿತ್ರಣವೂ ಇದೆ. ಅದಕ್ಕೆ ಪೂರಕವಾಗಿ ಫ್ಯಾಮಿಲಿ ಸೆಂಟಿಮೆಂಟ್, ನವಿರಾದ ಪ್ರೇಮ ಕಥಾನಕವೂ ಇಲ್ಲಿ ಮಿಳಿತವಾಗಿದೆ. ಇದರೊಂದಿಗೇ ಭರ್ಜರಿ ಮನೋರಂಜನಾತ್ಮಕ ಅಂಶಗಳೂ ಇಲ್ಲಿವೆ.
ಕಿರುತೆರೆ ಶೋಗಳ ಮೂಲಕ ಬೆಳಕಿಗೆ ಬಂದಿರೋ ಯುವ ಹಾಸ್ಯ ಕಲಾವಿದರ ತಂಡವೊಂದು ಸಿಂಗ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಇಡಲು ಸನ್ನದ್ಧವಾಗಿದೆ. ಸಿಂಗ ಎಂಬ ಫುಲ್ ಮೀಲ್ಸ್ ಸವಿಯಲು ಈ ತಿಂಗಳ ಹತ್ತೊಂಬತ್ತನೇ ತಾರೀಕಿನವರೆಗೆ ಕಾಯಬೇಕಿದೆ.