ಮುಂಬೈ: ಸಿನಿಮಾದಲ್ಲಿ ನಾಯಕಿ ಅಥವಾ ಇತರ ಮಹಿಳಾ ಪಾತ್ರಧಾರಿಯನ್ನು ಸ್ಪರ್ಶಿಸುವ, ಹೊಡೆಯುವ ಸನ್ನಿವೇಶ ಇಲ್ಲದೇ ಹೋದಲ್ಲಿ ಭಾವನೆ ಬರಲು ಸಾಧ‍್ಯವಿಲ್ಲ ಎಂದು ಬಾಲಿವುಡ್ ನಿರ್ದೇಶಕ ಸಂದೀಪ್ ವಂಗಾ ಹೇಳಿಕೊಂಡಿದ್ದಾರೆ.
ಶಾಹಿದ್ ಕಪೂರ್ ಅಭಿನಯದ ಕಬೀರ್ ಸಿಂಗ್ ಸಿನಿಮಾ ನಿರ್ದೇಶಕ ಸಂವಾದ ಕಾರ್ಯಕ್ರಮವೊಂದರಲ್ಲಿ ಸಂದೀಪ್ ಈ ಹೇಳಿಕೆ ನೀಡಿದ್ದಾರೆ. ಈ ಸಿನಿಮಾದಲ್ಲಿ ಮಹಿಳೆಯ ಮೇಲೆ ಕ್ರೌರ್ಯ ಮೆರೆಯುವ ದೃಶ್ಯಗಳಿರುವ ಬಗ್ಗೆ ಪತ್ರಕರ್ತರು ಅವರನ್ನು ಪ್ರಶ್ನಿಸಿದಾಗ ಅವರು ಈ ರೀತಿ ಉತ್ತರಿಸಿದ್ದಾರೆ.
‘ನಿಮ್ಮ ಹುಡುಗಿ ಜತೆ ನಿಕಟ ಸಂಬಂಧವಿದ್ದಾಗ ಆಕೆಯನ್ನು ಸ್ಪರ್ಶಿಸುವುದು, ಹೊಡೆಯುವುದು ಇತ್ಯಾದಿ ದೃಶ್ಯಗಳಿದ್ದೇ ಇರುತ್ತದೆ. ಆಗಲೇ ಭಾವನೆ ಮೂಡಲು ಸಾಧ‍್ಯ. ಇಂತಹ ಟೀಕೆಗಳೆಲ್ಲಾ ದುರದೃಷ್ಟಕರ’ ಎಂದು ಸಂದೀಪ್ ತಮ್ಮ ಸಿನಿಮಾದಲ್ಲಿ ಮಹಿಳೆಯನ್ನು ಚಿತ್ರಿಸಿದ ರೀತಿಯನ್ನು ಸಮರ್ಥಿಸಿಕೊಂಡಿದ್ದಾರೆ.