Publish Date: Mon, 27 Apr 2020 (09:46 IST)
Updated Date: Mon, 27 Apr 2020 (09:48 IST)
ಬೆಂಗಳೂರು: ಲಾಕ್ ಡೌನ್ ವೇಳೆ ಸ್ಟಾರ್ ನಟರು ತಮಗಿಷ್ಟವಾದ ಕೆಲಸಗಳನ್ನು ಮಾಡಿಕೊಂಡು ಮನೆಯಲ್ಲೇ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ಇದೀಗ ನಟ ಶಿವರಾಜ್ ಕುಮಾರ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನೆಯ ಆವರಣದೊಳಗೇ ಶಿವಣ್ಣ ನವ ಯುವಕನಂತೆ ಸೈಕಲ್ ತುಳಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ವಿಡಿಯೋ ನೋಡಿದ ಅಭಿಮಾನಿಗಳು ಈ ವಯಸ್ಸಿನಲ್ಲೂ ಶಿವಣ್ಣ ಎಷ್ಟು ಫಿಟ್ ಎಂದು ಉದ್ಘಾರ ತೆಗೆದಿದ್ದಾರೆ. ವಯಸ್ಸು 50 ದಾಟಿದರೂ ಇನ್ನೂ ಚಿರಯುವಕನಂತೇ ಲವಲವಿಕೆಯಿಂದಲೇ ಇರುವ ಶಿವಣ್ಣ ಎನರ್ಜಿಗೆ ಇನ್ನೊಂದು ಹೆಸರು ಎಂದರೂ ತಪ್ಪಾಗಲಾರದು.