ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಲಾಕ್ ಡೌನ್ ವೇಳೆ ತಾವು ಮನೆಯಲ್ಲಿ ಮಾಡುತ್ತಿರುವ ಕೆಲಸದ ಬಗ್ಗೆ ಫನ್ನಿ ಫೋಟೋವೊಂದನ್ನು ಹಾಕಿದ್ದು ವೈರಲ್ ಆಗಿದೆ.
ತಮ್ಮ ಇನ್ ಸ್ಟಾಗ್ರಾಂನಲ್ಲಿ ಮನೆಯಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿರುವ ಫೋಟೋ ಪ್ರಕಟಿಸಿರುವ ಶ್ರೀಮುರಳಿ, ಮನೆಯಲ್ಲಿ ಲಾಕ್ ಡೌನ್ ವೇಳೆ ಹೋಂ ರೂಲ್ಸ್ ಇದುವೇ. ಊಟ ಬೇಕಂದ್ರೆ ಪಾತ್ರೆ ಬೆಳಗಲೇ ಬೇಕು. ಇಲ್ಲಾಂದ್ರೆ ನನ್ನ ಹೆಂಡತಿ ವಿದ್ಯಾ ಗುರ್ ಅಂತಾಳೆ. ಇಷ್ಟು ಮಾಡೋಷ್ಟರಲ್ಲಿ ಬೆವರು ಕಿತ್ಕೊಂಡು ಬರುತ್ತೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನು ನೋಡಿದ ನಟ ವಸಿಷ್ಠ ಸಿಂಹ ಒಳ್ಳೆ ಕೆಲಸ ಬ್ರದರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಅಂತೂ ಒಳ್ಳೆ ಗಂಡ ಆಗ್ತಿದ್ದೀರಾ ಎಂದು ಕಾಲೆಳೆದಿದ್ದಾರೆ. ವಿಶೇಷವೆಂದರೆ ಪತಿಯ ಪೋಸ್ಟ್ ಗೆ ಪತ್ನಿ ವಿದ್ಯಾ ಶ್ರೀಮುರಳಿ ಕೂಡಾ ಕಾಮೆಂಟ್ ಮಾಡಿದ್ದು, ನಾಳೆಯಿಂದ ಸರಿಯಾದ ಹೊತ್ತಿಗೆ ಊಟ ಮಾಡಬೇಕು. ಇಲ್ಲಾಂದ್ರೆ ಹೋಂ ಡೆಲಿವರಿಯೂ ಇರಲ್ಲ. ನನ್ನ ಇಷ್ಟ ಮತ್ತು ನಿಮ್ಮ ಕಷ್ಟ ಎಂದು ಲೈಟಾಗಿ ಬೆದರಿಕೆ ಹಾಕಿದ್ದಾರೆ!