ಬೆಂಗಳೂರು: ನಟ ವಿಜಯ್ ಸೂರ್ಯ ಕಿರುತೆರೆಯಲ್ಲಿ ಅಗ್ನಿಸಾಕ್ಷಿ ಬಳಿಕ ಪ್ರೇಮಲೋಕದಲ್ಲಿ ಮಿಂಚುತ್ತಿದ್ದಾರೆ. ಈ ನಡುವೆ ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ಮಾಡುತ್ತಿರುತ್ತಾರೆ.
ಕೊನೆಯ ಬಾರಿ ವಿಜಯ್ ನಟಿಸಿದ್ದ ‘ಲಕ್ನೋ ಟು ಮುಂಬೈ’ ಇನ್ನೂ ಬಿಡುಗಡೆಯಾಗಿಲ್ಲ. ಅದಕ್ಕೂ ಮೊದಲು ವಿಜಯ್ ಇನ್ನೊಂದು ಸಿನಿಮಾ ಒಪ್ಪಿಕೊಂಡ ಸುದ್ದಿ ಬಂದಿದೆ. ಮದುವೆಯಾಗಿ, ಮಗುವೂ ಆದ ಮೇಲೆ ವಿಜಯ್ ಒಪ್ಪಿಕೊಂಡಿರುವ ಮೊದಲ ಸಿನಿಮಾವಿದು.
ಇದಕ್ಕೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಆದರೆ ಒಬ್ಬ ಟೆಕಿ ಪಾತ್ರ ಮಾಡುತ್ತಿದ್ದಾರಂತೆ. ತಮ್ಮ ವೈಯಕ್ತಿಕ ಜೀವನಕ್ಕೆ ಹತ್ತಿರವಾದ ಪಾತ್ರ. ಈ ಸಿನಿಮಾದಲ್ಲಿ ಹಾಡು, ಫೈಟ್ ಏನೂ ಇರಲ್ಲವಂತೆ. ಹಾಗಂತ ಡಿಂಪಲ್ ಹೀರೋನ ಮಹಿಳಾ ಫ್ಯಾನ್ ಗೆ ಬೇಸರವಾಗದಂತೆ ಎಲ್ಲರೂ ಮೆಚ್ಚುವ ರೀತಿಯಲ್ಲಿ ಸಿನಿಮಾ ಮಾಡಲಿದ್ದಾರಂತೆ. ಚೇತನ್ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಉಳಿದ ಡೀಟೈಲ್ಸ್ ಸದ್ಯದಲ್ಲೇ ವಿಜಯ್ ನೀಡಲಿದ್ದಾರೆ.