Publish Date: Fri, 06 May 2022 (22:48 IST)
Updated Date: Fri, 06 May 2022 (22:49 IST)
ಬೆಂಗಳೂರು: ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಕಂಡಿರುವ ಕೆಜಿಎಫ್ 2 ಸಿನಿಮಾವನ್ನು ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೀಕ್ಷಿಸಿದ್ದಾರೆ.
ಇಂದು ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಿಸಿದ ಶಿವಣ್ಣ ಸಿನಿಮಾ ಬಗ್ಗೆ ಹೊಗಳಿ ಮಾತನಾಡಿದ್ದಾರೆ. ತುಂಬಾ ಚೆನ್ನಾಗಿ ಮಾಡಿದ್ದಾರೆ. ಕೆಲವೊಂದು ದೃಶ್ಯಗಳಂತೂ ಅದ್ಭುತವಾಗಿದೆ ಎಂದಿದ್ದಾರೆ.
ಇನ್ನು, ರಾಕಿಂಗ್ ಸ್ಟಾರ್ ಯಶ್ ಬಗ್ಗೆ ವಿಶೇಷವಾಗಿ ಹೊಗಳಿರುವ ಶಿವರಾಜ್ ಕುಮಾರ್ ಯಶ್ ಎಂದರೆ ನನಗೆ ಮೊದಲಿಂದಲೂ ಪ್ರೀತಿ. ಅವರು ತುಂಬಾ ಎತ್ತರಕ್ಕೆ ಬೆಳೀತೀರಾ ಅಂತಿದ್ದೆ. ನಂಗೆ ಯಶ್ ನೋಡುವಾಗಲೆಲ್ಲಾ ನನ್ನ ತಮ್ಮನನ್ನು ನೋಡಿದ ಹಾಗೆಯೇ ಆಗುತ್ತೆ ಎಂದು ಶಿವಣ್ಣ ಕೊಂಡಾಡಿದ್ದಾರೆ.