Publish Date: Tue, 03 May 2022 (07:20 IST)
Updated Date: Tue, 03 May 2022 (07:33 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಭೈರಾಗಿ ಸಿನಿಮಾ ಹಾಡು ಇಂದು ಲಾಂಚ್ ಆಗುತ್ತಿದೆ.
ವಿಜಯ್ ಮಿಲ್ಟನ್ ನಿರ್ದೇಶನದ ಭೈರಾಗಿ ಸಿನಿಮಾದ ಹಾಡಿನ ಲಿರಿಕಲ್ ವಿಡಿಯೋ ಇಂದು ಬೆಳಿಗ್ಗೆ 10.50 ಕ್ಕೆ ಬಿಡುಗಡೆಯಾಗುತ್ತಿದೆ.
ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಡಾಲಿ ಧನಂಜಯ್, ಪೃಥ್ವಿ ಅಂಬರ್ ಮುಂತಾದ ಪ್ರತಿಭಾವಂತರು ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ.