Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕುಮಾರ್ ಕೊನೆಯದಾಗಿ ನಟಿಸಿದ್ದ ಜೇಮ್ಸ್ ಸಿನಿಮಾಗೆ ಶಿವರಾಜ್ ಕುಮಾರ್ ಶಿವಣ್ಣನ ಧ್ವನಿಯನ್ನೇ ಇಟ್ಟುಕೊಳ್ಳಲಾಗಿದೆ.
ಪುನೀತ್ ಗೆ ಶಿವಣ್ಣ ಧ್ವನಿ ನೀಡಿದ್ದರು. ಆದರೂ ಆದಷ್ಟು ಚಿತ್ರೀಕರಣದ ವೇಳೆ ರೆಕಾರ್ಡ್ ಮಾಡಿಕೊಂಡಿದ್ದ ಪುನೀತ್ ಧ್ವನಿಯನ್ನೇ ಆಧುನಿಕ ತಂತ್ರಜ್ಞಾನ ಬಳಸಿ ಬಳಸಿಕೊಳ್ಳಲು ಚಿತ್ರತಂಡ ಪ್ರಯತ್ನ ನಡೆಸಿತ್ತು.
ಆದರೆ ಈಗ ಶಿವಣ್ಣ ಧ್ವನಿಯನ್ನೇ ಇಡೀ ಸಿನಿಮಾದಲ್ಲಿ ಬಳಸಿಕೊಳ್ಳಲು ನಿರ್ಧರಿಸಿದೆ. ಚಿತ್ರ ಮಾರ್ಚ್ 17 ರಂದು ಬಿಡುಗಡೆಯಾಗಲಿದ್ದು, ಮಾರ್ಚ್ 1 ಕ್ಕೆ ಹಾಡೊಂದು ರಿಲೀಸ್ ಆಗಲಿದೆ.