Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಡಬ್ಬಿಂಗ್ ವೇಳೆ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಈ ಕ್ಷಣಗಳನ್ನು ಜಗ್ಗೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಘವೇಂದ್ರ ಸ್ಟೋರ್ಸ್ ಮಾತಿನ ಮರು ಜೋಡಣೆ ನಡುವೆ ಆಕಸ್ಮಿಕವಾಗಿ ಆತ್ಮೀಯ ಸಹೋದರ ಶಿವಣ್ಣನ ಭೇಟಿ. ಮಗುವಿನಂತಹ ಮನಸ್ಸಿನ ಶಿವಣ್ಣನನ್ನು ಭೇಟಿಯಾದರೆ ನನಗಾಗುವ ಆನಂದವೇ ಬೇರೆ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಜಗ್ಗೇಶ್ ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ತೋತಾಪುರಿ ಸಿನಿಮಾ ಬಿಡುಗಡೆ ಹಂತದಲ್ಲಿದೆ.