Publish Date: Wed, 27 Oct 2021 (10:05 IST)
Updated Date: Wed, 27 Oct 2021 (10:06 IST)
ಬೆಂಗಳೂರು: ಭಜರಂಗಿ 2 ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೇದಿಕೆಯಲ್ಲೇ ಅಭಿಮಾನಿಗಳ ಮೇಲೆ ಗರಂ ಆದ ಘಟನೆ ನಡೆದಿದೆ.
ರಾಕಿಂಗ್ ಸ್ಟಾರ್ ಯಶ್, ಪುನೀತ್ ರಾಜ್ ಕುಮಾರ್ ಜೊತೆ ವೇದಿಕೆ ಹಂಚಿಕೊಳ್ಳಲು ಬಂದಾಗ ಅಭಿಮಾನಿಗಳು ಹೀರೋ ಹೀರೋ ಹ್ಯಾಟ್ರಿಕ್ ಹೀರೋ ಎಂದು ಜೈಕಾರ ಹಾಕಿದರು.
ತಕ್ಷಣವೇ ಮೈಕ್ ಕೈಗೆತ್ತಿಕೊಂಡ ಶಿವಣ್ಣ ಕೈ ಸನ್ನೆಯಲ್ಲೇ ಬೇಡ ಎನ್ನುತ್ತಾ ಗಂಭೀರವಾಗಿ ಬೇಡ ಓವರ್ ಆಕ್ಟಿಂಗ್ ಎಲ್ಲಾ ಬೇಡ. ಸೈಲೆನ್ಸ್ ಇರಲಿ ಎಂದರು. ಶಿವಣ್ಣ ಗರಂ ಆಗಿ ಹೇಳಿದ ದಾಟಿಗೆ ಪಕ್ಕದಲ್ಲಿದ್ದ ಯಶ್, ಪುನೀತ್ ನಕ್ಕರೆ, ಜೈಕಾರ ಹಾಕುತ್ತಿದ್ದ ಫ್ಯಾನ್ಸ್ ಸುಮ್ಮನಾದರು.