Publish Date: Wed, 27 Oct 2021 (09:55 IST)
Updated Date: Wed, 27 Oct 2021 (10:02 IST)
ಬೆಂಗಳೂರು: ಭಜರಂಗಿ 2 ಸಿನಿಮಾ ಪ್ರಿ ರಿಲೀಸ್ ಈವೆಂಟ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡಿ ಹೊಗಳಿದ್ದಾರೆ.
ಪ್ರಿ ರಿಲೀಸ್ ಈವೆಂಟ್ ಗೆ ಅತಿಥಿಯಾಗಿ ಬಂದಿದ್ದ ರಾಕಿಂಗ್ ಸ್ಟಾರ್ ಯಶ್, ಸಿನಿಮಾಗೆ ಶುಭ ಕೋರಿದ್ದಲ್ಲದೆ, ನಾನು ಹುಟ್ಟಿದಾಗಲೇ ಶಿವಣ್ಣ ಸ್ಟಾರ್ ಆಗಿದ್ರು. ಶಿವಣ್ಣ, ಅಪ್ಪು ಸಾರ್ ನೋಡಿ ನಾವೆಲ್ಲಾ ಸ್ಪೂರ್ತಿ ಪಡೆದಿದ್ದೇವೆ ಎಂದು ಯಶ್ ಹೊಗಳಿದರು.
ಬಳಿಕ ಮಾತನಾಡಿದ ಶಿವಣ್ಣ ಯಶ್ ನನ್ನ ಫ್ಯಾನ್ ಎಂದರು. ಆದರೆ ನಾನು ಯಶ್ ಬಗ್ಗೆ ಹೇಳಲೇಬೇಕು. ಈವತ್ತು ನ್ಯಾಷನಲ್ ಸ್ಟಾರ್ ಆದ್ರೂ ಅದೇ ವಿನಯವಂತಿಕೆ ಉಳಿಸಿಕೊಂಡಿದ್ದಾರೆ. ಯಶ್ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ. ಅವರು ತುಂಬಾ ಹ್ಯಾಂಡ್ಸಮ್ ಎಂದು ಶಿವಣ್ಣ ಹೊಗಳಿದ್ದಾರೆ. ಪ್ರಿರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಯಶ್, ಶಿವಣ್ಣ ಜೊತೆಯಾಗಿ ಭಜರಂಗಿ 2 ಟೈಟಲ್ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳಿಗೆ ಖುಷಿಕೊಟ್ಟರು.