Publish Date: Sat, 09 Oct 2021 (10:40 IST)
Updated Date: Sat, 09 Oct 2021 (10:41 IST)
ಬೆಂಗಳೂರು: ಅಕ್ಟೋಬರ್ 14 ರಂದು ಬಿಡುಗಡೆಯಾಗಲಿರುವ ದುನಿಯಾ ವಿಜಿ ನಿರ್ದೇಶಿಸಿ, ನಟಿಸಿರುವ ಸಲಗ ಸಿನಿಮಾ ಯಶಸ್ಸಿಗಾಗಿ ದೇವರ ಮೊರೆ ಹೋಗಿದೆ.
ದುನಿಯಾ ವಿಜಿ, ಪತ್ನಿ ಹಾಗೂ ಚಿತ್ರತಂಡ ನಗರದ ಅಣ್ಣಮ್ಮ ದೇವಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಯಶಸ್ಸಿಗಾಗಿ ಪ್ರಾರ್ಥನೆ ಮಾಡಿದೆ.
ದಸರಾ ಹಬ್ಬಕ್ಕೆ ತೆರೆಗೆ ಬರಲಿರುವ ಸಲಗ ಸಿನಿಮಾ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ನಾಳೆ ಪ್ರಿ ರಿಲೀಸ್ ಈವೆಂಟ್ ಕೂಡಾ ಅದ್ಧೂರಿಯಾಗಿ ಆಯೋಜಿಸಲಾಗಿದೆ. ಮೊದಲ ಬಾರಿಗೆ ದುನಿಯಾ ವಿಜಿ ನಿರ್ದೇಶನಕ್ಕಿಳಿದಿರುವುದರಿಂದ ಈಸಿನಿಮಾ ಮೇಲೆ ಅವರಿಗೆ ಭಾರೀ ನಿರೀಕ್ಷೆಯಿದೆ.