ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೆಂಬಲ ನೀಡಲು ಕೆಜಿಎಫ್ 2 ಟೀಂ ಮೈದಾನಕ್ಕೆ ಬಂದಿದೆ.
ಅಧೀರ ಪಾತ್ರಧಾರಿ ಸಂಜಯ್ ದತ್, ರವೀನಾ ಟಂಡನ್, ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಇತರರು ಆರ್ ಸಿಬಿ ಜೆರ್ಸಿ ತೊಟ್ಟುಕೊಂಡು ತಂಡಕ್ಕೆ ಚಿಯರ್ ಮಾಡಿದ್ದಾರೆ.
ಆರ್ ಸಿಬಿ ಮತ್ತು ಕೆಜಿಎಫ್ 2 ಟೀಂ ಕೊಲಾಬ್ರೇಷನ್ ಮಾಡಿಕೊಂಡಿದೆ. ಇದಕ್ಕೂ ಮೊದಲು ಆರ್ ಸಿಬಿ ಕ್ರಿಕೆಟಿಗರಿಂದಲೂ ಕೆಜಿಎಫ್ ಗೆ ಪ್ರಮೋಷನ್ ಮಾಡಿಸಲಾಗಿತ್ತು.