Publish Date: Wed, 16 Sep 2020 (10:46 IST)
Updated Date: Wed, 16 Sep 2020 (10:47 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ಸಂಜನಾ ಗಲ್ರಾನಿಯ ಸಿಸಿಬಿ ಕಸ್ಟಡಿ ಇಂದಿಗೆ ಅಂತ್ಯವಾಗಲಿದ್ದು, ಇಂದು ಸಂಜೆ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ.
ಇಂದು ಕೋರ್ಟ್ ಮತ್ತೆ ಅವರನ್ನು ಸಿಸಿಬಿ ಕಸ್ಟಡಿಗೆ ಕೊಡುವ ಸಾಧ‍್ಯತೆ ಕಡಿಮೆ. ರಾಗಿಣಿಗೆ ಮಾಡಿದಂತೇ ಸಂಜನಾರನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸುವ ಸಾಧ‍್ಯತೆ ಹೆಚ್ಚು. ಹೀಗಾಗಿ ಅವರೂ ಇಂದು ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ‍್ಯತೆಯಿದೆ. ಅದಕ್ಕೂ ಮೊದಲು ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಯಲಿದೆ.