Publish Date: Fri, 08 Oct 2021 (16:40 IST)
Updated Date: Fri, 08 Oct 2021 (16:41 IST)
ಹೈದರಾಬಾದ್: ನಾಗಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಬೆನ್ನಲ್ಲೇ ಸಮಂತಾ ಋತು ಪ್ರಭು ಬಗ್ಗೆ ಹಲವು ಊಹಾಪೋಹಗಳು ಹರಡಿದ್ದವು. ಅದೆಲ್ಲದಕ್ಕೂ ಸಮಂತಾ ಈಗ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ.
ಸಮಂತಾ-ನಾಗಚೈತನ್ಯ ವಿಚ್ಛೇದನದ ಬಗ್ಗೆ ಹಲವು ಕಾರಣಗಳ ಬಗ್ಗೆ ಅಂತರ್ಜಾಲದಲ್ಲಿ, ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಕೆಲವರು ಸಮಂತಾ ಗರ್ಭಪಾತ ಮಾಡಿಸಿಕೊಂಡರು, ಅವರಿಗೆ ಮಕ್ಕಳಾಗುವುದು ಬೇಕಿರಲಿಲ್ಲ, ಅವರೀಗ ಬೇರೊಬ್ಬರ ಪ್ರೀತಿಗೆ ಬಿದ್ದಿದ್ದಾರೆ ಎಂದೆಲ್ಲಾ ಸುಳ್ಳು ಸುದ್ದಿ ಹರಡಿಸಿದ್ದರು.
ಇದೆಲ್ಲದರ ಬಗ್ಗೆ ಪ್ರತಿಕ್ರಿಯಿಸಿರುವ ಸಮಂತಾ ಇಂತಹ ಸುಳ್ಳು ಸುದ್ದಿಗಳಿಂದ ನನ್ನನ್ನು ವಿಚಲಿತಳಾಗಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ವಿಚ್ಛೇದನ ಎನ್ನುವುದು ತೀರಾ ವಿಷಾಧದ ಸಂಗತಿ. ಇದರಿಂದ ನನಗೆ ಹೊರಬರಲು ಸಮಯ ಕೊಡಿ. ಈ ರೀತಿ ವೈಯಕ್ತಿಕ ತೇಜೋವಧೆ ಕಠಿಣವಾಗಿರಬಹುದು. ಆದರೆ ಅದರಿಂದ ನನ್ನನ್ನು ವಿಚಲಿತಳಾಗಿಸಲು ಸಾಧ‍್ಯವಿಲ್ಲ ಎಂದು ಸಮಂತಾ ಹೇಳಿದ್ದಾರೆ.