Webdunia - Bharat's app for daily news and videos

Install App

ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ಸಮಂತಾ, ನಾಗಚೈತನ್ಯ

Webdunia
ಶನಿವಾರ, 7 ಅಕ್ಟೋಬರ್ 2017 (15:53 IST)
ಗೋವಾ: ಟಾಲಿವುಡ್ ಸ್ಟಾರ್ ಜೋಡಿ ಸಮಂತಾ ಮತ್ತು ಅಕ್ಕಿನೇನಿ ನಾಗಚೈತನ್ಯ ಜೋಡಿ ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಗೋವಾ ಕಡಲ ತೀರದಲ್ಲಿ ನಿನ್ನೆ ಇವರಿಬ್ಬರ ಮದುವೆ ನೆರವೇರಿದ ಮದುವೆಗೆ ತೆಲುಗು ಚಿತ್ರರಂಗದ ಗಣ್ಯರು ಸಾಕ್ಷಿಯಾದರು.

ಹಿಂದೂ ಸಂಪ್ರದಾಯದಂತೆ ಸಮಂತಾ, ನಾಗಚೈತನ್ಯ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರು ಸಹ ಸಾಂಪ್ರದಾಯಿಕ ರೇಷ್ಮೆ ವಸ್ತ್ರ ಧರಿಸಿದ್ದರು. ರೀಲ್ ಲೈಫಿನಲ್ಲಿ ಮದುವೆಯಾಗಿದ್ದ ಈ ಜೋಡಿ, ಈಗ ರಿಯಲ್ ಲೈಫಿನಲ್ಲೂ ಒಂದಾಗಿದ್ದಾರೆ.

ಇವರಿಬ್ಬರ ಮದುವೆಗೆಂದೇ ಗೋವಾದ ಕಡಲತೀರದಲ್ಲಿ ವಿಶೇಷ ಸೆಟ್ ಹಾಕಲಾಗಿತ್ತು. ಚಂದದ ಸಿಂಗಾರ ಮಾಡಿದ್ದ ಸೆಟ್ ನಲ್ಲಿ ನಾಗಚೈತನ್ಯ, ಸಮಂತಾಗೆ ಮಾಂಗಲ್ಯಧಾರಣೆ ಮಾಡಿದರು.

ಇಂದು ಕ್ರೈಸ್ತ ಧರ್ಮದ ಪ್ರಕಾರ ನಾಗಚೈತನ್ಯ, ಸಮಂತಾ ಮದುವೆ ನಡೆಯಲಿದೆ. ಇಲ್ಲಿ ಕೂಡ ಎರಡೂ ಕುಟುಂಬದವರು ಹಾಗೂ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ. ಇನ್ನು ಅ. 15ರಂದು ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಆರತಕ್ಷತೆ ನಡೆಯಲಿದೆ. ಅಭಿಮಾನಿಗಳು ಹಾಗೂ ಗಣ್ಯರಿಗೆ ಆಹ್ವಾನ ನೀಡಬಹುದು ಎನ್ನಲಾಗಿದೆ.

ಈ ಜೋಡಿ ಒಟ್ಟಿಗೆ ನಟಿಸಿದ ಸಿನಿಮಾ `ಏ ಮಾಯೇ ಚೇಸಾವೆ’ ಶುರುವಾಗಿದ್ದು, ನ್ಯೂಯಾರ್ಕ್ ನಲ್ಲಿ. ಹೀಗಾಗಿ ಈ ಕ್ಯೂಟ್ ಕಪಲ್ ಹನಿಮೂನ್ ಗಾಗಿ ಅಲ್ಲಿಗೆ ಹೋಗೊ ಪ್ಲಾನ್ ಮಾಡಿದ್ದಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments