ಟಾಲಿವುಡ್ ಜನಪ್ರಿಯ ನಟಿ ಸಮಂತಾ ಮತ್ತು ಹೀರೋ ನಾಗಚೈತನ್ಯ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿದೆ. ಹಿಂದೂ ಸಂಪ್ರದಾಯದ ಪ್ರಕಾರ ಜತೆಗೆ ಕ್ರಿಶ್ಚಿಯನ್ ಸಂಪ್ರದಾಯದಂತೆಯೂ ನಿಶ್ಚಿತಾರ್ಥ ನಡೆದಿರುವುದು ವಿಶೇಷ.
ಈ ಕಾರ್ಯಕ್ರಮದಲ್ಲಿ ನಾಗಚೈತನ್ಯ ಅಂದೆ ಅಕ್ಕಿನೇನಿ ನಾಗಾರ್ಜುನ, ತಾಯಿ ಅಮಲಾ ಪಾಲ್ಗೊಂಡಿದ್ದರು. ಇವರ ಜತೆಗೆ ಶೀಘ್ರದಲ್ಲೇ ಹಸೆಮಣೆ ಏರುತ್ತಿರುವ ಅಖಿಲ್ ತನ್ನ ಭಾವಿ ಪತ್ನಿ ಜತೆಗೆ ಆಗಮಿಸಿದ್ದರು. ಈ ಕಲರ್ಫುಲ್ ಕಾರ್ಯಕ್ರಮಕ್ಕೆ ಮಾಧ್ಯಮದವರನ್ನು ಆಹ್ವಾನಿಸದಿದ್ದರೂ ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ನಾಗಾರ್ಜುನ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈಗೆಲ್ಲಾ ಅಧಿಕೃತವಾಗಿದೆಯೆಂದು, ತೆಲುಗಿನ ಮನಂ ಸಿನಿಮಾದಲ್ಲಿ ತನಗೆ ತಾಯಿಯಾಗಿ ಅಭಿನಯಿಸಿರುವ ಸಮಂತಾ ಈಗ ಮಗಳಾಗಿದ್ದಾಳೆ ಎಂದು ನಾಗಾರ್ಜುನ ಹೇಳಿದ್ದಾರೆ. ತುಂಬಾ ಖುಷಿಯಾಗಿರುವ ನಾಗಾರ್ಜುನ ಮಾತಿನಲ್ಲಿ ಹೇಳಲು ಆಗದಷ್ಟು ಸಂತೋಷವಾಗಿದ್ದೇನೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.