ಹೈದರಾಬಾದ್:ಟಾಲಿವುಡ್ ನಟ ನಾಗಚೈತನ್ಯರನ್ನು ವಿವಾಹವಾಗಿ ಅಕ್ಕಿನೇನಿ ಸೊಸೆಯಾಗಲಿರುವ ಸೌತ್ ಬ್ಯೂಟಿ ಸಮಂತಾ, ಮದು ಸಮೀಪಿಸುತ್ತಿದ್ದಂತೆ ಹೆಚ್ಚೆಚ್ಚು ಬೋಲ್ಡ್ ಲುಕ್ ಗಳಲ್ಲಿ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅಷ್ಟೇ ಅಲ್ಲ ಅಷ್ಟೇ ಬೋಲ್ಡ್ ಆಗಿ ಮಾತನಾಡುತ್ತಿರುವುದು ಇನ್ನೂ ಕುತೂಹಲ.
ಅಕ್ಟೋಬರ್ 6ರಂದು ನಾಗಚೈತನ್ಯ ಜತೆ ವಿವಾಹವಾಗಲಿರುವ ಸಮಂತಾ ತಾವು ಕಮಿಟ್ ಆಗಿರುವ ಪ್ರಾಜೆಕ್ಟ್ ಗಳನ್ನು ಮುಗಿಸುತ್ತಿದ್ದಾರೆ. ಈ ನಡುವೆ ಜೆ ಎಫ್ ಡಬ್ಲ್ಯೂ ಮ್ಯಾಗಜೀನ್ ನಲ್ಲಿ ಹಾಟ್ ಸ್ಟೀಲ್ಸ್ ನಲ್ಲಿ ಕಾಣಿಸಿಕೊಂಡಿರುವ ಸಮಂತಾ ಅಂಷ್ಟೇ ಬೋಲ್ಡ್ ಆಗಿ ಕೆಲ ಪ್ರಶ್ನೆ ಗಳಿಗೆ ಉತ್ತರಿಸಿ ಅಚ್ಚರಿ ಮೂಡಿಸಿದ್ದಾರೆ.
ನೀವು ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತೀರಿ...ಆಹಾರಕ್ಕೋ, ಸೆಕ್ಸ್ಗೋ? ' ಎಂಬ ಮಾಧ್ಯಮದ ಪ್ರಶ್ನೆಗೆ ನಗುತ್ತಾ ಇದೊಂದು ಕಷ್ಟ ಪ್ರಶ್ನೆ. ಆಯ್ಕೆ ಕಷ್ಟ ಎನ್ನುತ್ತಾ ಸೆಕ್ಸ್ಗೆ ನನ್ನ ಆದ್ಯತೆ ಎಂದು ಡೇರ್ ಆಗಿ ಉತ್ತರಿಸಿದ್ದಾರೆ.